Breaking News

ರಾಹುಲ್ ಗಾಂಧಿಗೆ ಬುದ್ದಿ ಮೆದುಳಲ್ಲಿಲ್ಲ, ತೊಡೆಯಲ್ಲಿದೆ- ಯತ್ನಾಳ್​ ಎಡವಟ್ಟು

Spread the love

ಹುಬ್ಬಳ್ಳಿ, : ರಾಹುಲ್‌ ಗಾಂಧಿಗೆ ಬುದ್ಧಿ ಮೆದುಳಿನಲ್ಲಿಲ್ಲ, ತೊಡೆಯಲ್ಲಿದೆ ಎಂದು ಮಾತಿನ ಭರದಲ್ಲಿ ಮತ್ತೊಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda patil yatnal) ಹಳಿ ತಪ್ಪಿದ್ದಾರೆ. ಧಾರವಾಡ ಜಿಲ್ಲೆಯ ‌ಕುಂದಗೋಳದಲ್ಲಿ ಪ್ರಹ್ಲಾದ್‌ ಜೋಶಿ ಪರ ಪ್ರಚಾರ ಸಭೆಯಲ್ಲಿಮಾತನಾಡಿದಅವರು, ‘ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಸಚಿವ ದಿನೇಶ್‌ ಗುಂಡೂರಾವ್ ಹುಚ್ಚರು, ನಮ್ಮ ದೇಶ ಆಳಲು ರಾಹುಲ್ ಸಮರ್ಥನಾ? ಎಂದು ವಾಗ್ದಾಳಿ ನಡೆಸಿದ್ದಾರೆ.ರಾಹುಲ್ ಗಾಂಧಿಗೆ ಬುದ್ದಿ ಮೆದುಳಲ್ಲಿಲ್ಲ, ತೊಡೆಯಲ್ಲಿದೆ- ಯತ್ನಾಳ್​ ಎಡವಟ್ಟು

ರಾಹುಲ್ ಗಾಂಧಿ ಗೆದ್ರೆ ಬಟಾಯಿಂದ ಬಂಗಾರ

ಇದೇ ವೇಳೆ ರಾಹುಲ್ ಗಾಂಧಿ ಗೆದ್ರೆ ಬಟಾಯಿಂದ ಬಂಗಾರ ಬರುತ್ತದೆ, ಇದನ್ನು ರಾಹುಲ್ ಗಾಂಧಿನೇ ಹೇಳಿದ್ದು. ಬಂಗಾರ ಬಂದ್ರೆ ನಮ್ಮ ದೇಶ ಯಾಕೆ ಬಡತನ ಇರುತ್ತಿತ್ತು ರಾಹುಲ್ಲಾ ಎಂದು ವ್ಯಂಗ್ಯವಾಡಿದ್ದಾರೆ. ಅವನು ಎಂದು ಏಕವಚನದಲ್ಲೇ ಕಿಡಿಕಾರಿದ ಯತ್ನಾಳ್​, ‘ಅವನು ಏನ ಮಾತಾಡ್ತಾನೆ ಅವನಿಗೆ ಗೊತ್ತಿಲ್ಲ. ಮೊನ್ನೆ ರಾಣೆಬೆನ್ನೂರ ಕಡೆ ಬಂದಿದ್ದ, ಈ ವೇಳೆ ಹುಚ್ಚರಾದ ಡಿಕೆ ಶಿವಕುಮಾರ್, ದಿನೇಶ್​ ಗುಂಡೂರಾವ್ ಆತನಿಗೆ ಮೆಣಸಿನಕಾಯಿ ತೋರಿಸಿದರು.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ