ಹೊಸಕೋಟೆ: ಮಾರುಕಟ್ಟೆಯಲ್ಲಿ ಆವಕ ಕುಸಿದ ಕಾರಣ ಈ ವಾರ ಬೀನ್ಸ್ ಬೆಲೆ ಏಕಾಏಕಿ ಏರಿಕೆಯಾಗಿದ್ದು ಕೆ.ಜಿ. ಬೀನ್ಸ್ ಬೆಲೆ ₹250 ಗಡಿ ತಲುಪಿದೆ.
ಮಾರುಕಟ್ಟೆಯಲ್ಲಿ ಕೋಳಿಮಾಂಸಕ್ಕಿಂತ ಬೀನ್ಸ್ ದುಬಾರಿಯಾಗಿದೆ. ಕೆ.ಜಿ ಕೋಳಿ ಮಾಂಸ ₹240 ಇದ್ದರೆ, ಬೀನ್ಸ್ ₹250ರಂತೆ ಮಾರಾಟವಾಗುತ್ತಿದೆ.

ಕಳೆದ ವಾರ ₹130-₹140 ಆಸುಪಾಸಿನಲ್ಲಿದ್ದ ಕೆ.ಜಿ ಬೀನ್ಸ್ ಈ ವಾರ ದಿಢೀರ್ ನೂರು ರೂಪಾಯಿ ಏರಿಕೆಯಾಗಿದೆ. ಈ ಮೊದಲು ಕೆ.ಜಿ ಲೆಕ್ಕದಲ್ಲಿ ಬೀನ್ಸ್ ಖರೀದಿಸುತ್ತಿದ್ದ ಗ್ರಾಹಕರು ಈಗ ಗ್ರಾಂ ಲೆಕ್ಕಕ್ಕೆ ಇಳಿದಿದ್ದಾರೆ!
ಬೀನ್ಸ್ ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಗಜ್ಜರಿ ನೂರರ ಗಡಿ ಸಮೀಪಿಸಿದೆ. ಸೊಪ್ಪು, ಮೂಲಂಗಿ, ಬದನೆಕಾಯಿ, ಹಾಗಲಕಾಯಿ, ಬೀಟ್‍ರೂಟ್, ನವಿಲುಕೋಸು, ಬೆಂಡೆಕಾಯಿ, ಹೀರೇಕಾಯಿ, ಮೆಣಸಿನಕಾಯಿ, ಕ್ಯಾಪ್ಸಿಕಮ್, ನುಗ್ಗೇಕಾಯಿ ಸೇರಿದಂತೆ ಹೆಚ್ಚಿನ ತರಕಾರಿ ಬೆಲೆ ₹60ಕ್ಕಿಂತ ಕೆಳಗೆ ಇಳಿಯುತ್ತಿಲ್ಲ.
Laxmi News 24×7