ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 ರಾಜ್ಯಗಳ 88 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲೂ ಇದರ ಬಿಸಿ ಏರುತ್ತಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದ್ದು, ಬಹುಭಾಷಾ ನಟ ಪ್ರಕಾಶ್ ರೈ ತಮ್ಮ ಅತ್ಯ ಅಮೂಲ್ಯ ಮತವನ್ನು ಚಲಾಯಿಸಿದರು.

ಮತವನ್ನು ಚಲಾಯಿಸಿದ ಪ್ರಕಾಶ್ ರೈ ಎಲ್ಲರೂ ಮತವನ್ನು ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತಾದ ವಿಡಿಯೋವನ್ನು ಪ್ರಕಾಶ್ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಬಿಜೆಪಿ ವಿರುದ್ಧ ಧ್ವನಿ ಎತ್ತಿದ್ದಾರೆ.
ಕಳೆದ ದಶಕದಲ್ಲಿ ನಾವು ಕಂಡ ದ್ವೇಷ ಮತ್ತು ಒಡೆದು ಆಳುವ ರಾಜಕಾರಣದಿಂದ ನಾನು ನಂಬಿದ ಅಭ್ಯರ್ಥಿ ಮತ್ತು ಅವರು ತಂದ ಪ್ರಣಾಳಿಕೆಗೆ ಮತ ಹಾಕಿದ್ದೇನೆ ಮತ್ತು ಬದಲಾವಣೆಗಾಗಿ ಮತ ಹಾಕಿದ್ದೇನೆ. ನಾನು ನನ್ನ ಕ್ಷೇತ್ರದಿಂದ ಉತ್ತಮ ಪ್ರತಿನಿಧಿಗಾಗಿ ಮತ ಹಾಕಿದ್ದೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					 
						
					