ಕೋಲಾರ: ಪ್ರಧಾನಿ ಮೋದಿಯವರು ಶನಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿವಾದಿತ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
“ಮೋದಿ ಸಾಹೇಬರೇ, ದೇವರ ಮೇಲೆ ನಂಬಿಕೆ ಇರಿಸಿಕೊಂಡು ಕಾಯುತ್ತಿದ್ದೇವೆ.
ಜೂ. 4ರಂದು ದೇಶಕ್ಕೆ ಹಿಡಿದ ಶನಿ ಬಿಡುತ್ತದೆ. ನೀನು ದೇಶಕ್ಕೆ ಹಿಡಿದ ಶನಿ ಕಣಯ್ನಾ’ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಡವರಿಗೆ, ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.
“ಇಂದಿರಾ ಅವರಂಥ ಮಹಾ ನಾಯಕಿ ಕುಳಿತಿದ್ದ ಸೀಟಿನಲ್ಲಿ ಬಂದು ಕುಳಿತು ಬಿಟ್ಟಿದ್ದೀಯಾ, ಇಂದಿರಾ ಗಾಂಧಿ ಎಲ್ಲಿ, ನೀನೆಲ್ಲಿ? ಎಲ್ಲ ಜಾತಿಯ ಬಡವರಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇಂದಿರಾ ಗಾಂಧಿ ಆತ್ಮಸ್ಥೈರ್ಯ ತುಂಬಿದ್ದರು. ಇರಲೊಂದು ಮನೆ, ಹೊಟ್ಟೆ ತುಂಬ ಊಟ, ಮಕ್ಕಳಿಗೆ ಓದು. ಓದಿದಮಕ್ಕಳಿಗೆ ಉದ್ಯೋಗ ನೀಡಿದ್ದರು. ಎಂಥ ಜಾಗಕ್ಕೆ ಎಂಥವನು ಬಂದು ಕುಳಿತುಬಿಟ್ಟನಪ್ಪ’ ಎಂದರು.
ಅಚ್ಛೇ ದಿನ ಬಂದಿಲ್ಲ
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶಕ್ಕೆ ಒಳ್ಳೆಯ ದಿನ ಬಂದಿಲ್ಲ ಎಂದು ಮಾಜಿ ಸ್ಪೀಕರ್‌ಟೀಕಿಸಿದರು. “ಅಚ್ಛೇ ದಿನ ಆಯೇಗಾ, ದುಡ್ಡು ತಂದು ಕೊಟ್ಟು ಬಿಡುತ್ತೇನೆ. ಬೆಲೆ ನಿಯಂತ್ರಿಸುತ್ತೇನೆ. ಉದ್ಯೋಗ ನೀಡುತ್ತೇನೆ ಎಂದರು. ಉದ್ಯೋಗ ಕೊಟ್ಟರಾ, ಯಾರಾದರೂ ಕೆಲಸಕ್ಕೆ ಸೇರಿದ್ದಾರಾ? ಸಣ್ಣಪುಟ್ಟವರು ಸುಳ್ಳು ಹೇಳಿದ್ದನ್ನು ನೋಡಿದ್ದೇನೆ. ಸಂತೆಯಲ್ಲಿ ಹಾವಾಡಿಗರು ಸುಳ್ಳು ಹೇಳಿದ್ದನ್ನು ನೋಡಿದ್ದೇನೆ. ಪ್ರಧಾನಿ ಸ್ಥಾನದಲ್ಲಿ ಕುಳಿತು ಸುಳ್ಳು ಹೇಳುತ್ತಿರುವ ಮೋದಿಯನ್ನೇ ನೋಡುತ್ತಿದ್ದೇನೆ. ಈ ತರಹ ಸುಳ್ಳು ಹೇಳಿದವರನ್ನು ಪ್ರಪಂಚದ ಇತಿಹಾಸದಲ್ಲಿಯೇ ನೋಡಿಲ್ಲ’ ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರ, ದೇಶವಿರೋಧಿ ಚಟುವಟಿಕೆ ಮಾಡುವವರಿಗೆ, ಜನವಿರೋಧಿ ಕೆಲಸ ಮಾಡುವವರ ಪಾಲಿಗೆ ಪ್ರಧಾನಿ ಮೋದಿ ಶನಿ ಹೌದು. ದೇಶಭಕ್ತರು, ಯುವಕರು, ಹೆಣ್ಣುಮಕ್ಕಳ ಪಾಲಿಗೆ ವರ ಕೊಡುತ್ತಾರೆ.