ಚಿತ್ರರ್ದು, : ರಾಜ್ಯದಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು, ಕುಟುಂಬದ ಮುಖ್ಯಸ್ಥರಿಂದ 4-5 ಸಾವಿರ ಹಣ ವಸೂಲಿ ಮಾಡುವ ಕಾಂಗ್ರೆಸ್ ಪಿಕ್ ಪಾಕೆಟ್ ಸರ್ಕಾರವಿದೆ. ಅವರು ಇಲ್ಲಿಯವರೆಗೂ ಬಿಜೆಪಿ ಬೈಯುವುದನ್ನು ಬಿಟ್ಟು ಬೇರೆ ಏನು ಅಭಿವೃದ್ದಿ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದರು.

ನಗರದ ನೆಹರೂ ಮೈದಾನದಲ್ಲಿ ಮಾತನಾಡಿದ ಅವರು, ಕೇವಲ 2 ಸಾವಿರ ಕೊಟ್ಟಿರುವ ಕಾಂಗ್ರೆಸ್, ಬಡವರ ಬೆವರು ಸುರಿಸಿದ ತೆರಿಗೆಯ ಸುಮಾರು ೩೫೦ ಕೋಟಿ ಹಣವನ್ನು ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ. ಅಂದು ನೀರಿಗಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ಇಂದು ಸಾರ್ವಜನಿಕರ ಆಸ್ತಿ ಲೂಟಿ ಮಾಡುತ್ತಿದೆ.
ಬೆಂಗಳೂರು ಜನತೆಗೆ ಕುಡಿವ ನೀರಿಲ್ಲ. ಆದರೆ ಅಪಾರ್ಟ್ಮೆಂಟ್‌ನಲ್ಲಿ ತಮ್ಮನಿಗೆ ಮತ ನೀಡಿದ್ರೇ ನೀರು ಕೊಡ್ತೀನಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರ ನಡೆಸಲು ಜಾತಿಗಣತಿ ಬೇಕಾಗಿಲ್ಲ. ತಾಯಿ ಹೃದಯ ಬೇಕು ಸಿದ್ದರಾಮಯ್ಯ ಅವರೇ, ಜಾತಿ ವ್ಯವಸ್ಥೆ ಹೋಗಲಾಡಿಬೇಕು ಅನ್ನುತ್ತೀರಾ, ಜಾತಿ-ಜಾತಿ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಿರಾ ಎಂದು ವಾಗ್ದಾಳಿ ನಡೆಸಿದರು.
Laxmi News 24×7