ಬೆಂಗಳೂರು: ಚುನಾವಣೆ ಘೋಷಣೆ ಯಾದ ಅನಂತರ ಬುಧವಾರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಲಿರುವ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಹೈವೋಲ್ಟೆàಜ್ ಕ್ಷೇತ್ರ ಗಳಲ್ಲಿ ಒಂದಾದ ಮಂಡ್ಯದಲ್ಲಿ ಚುನಾ ವಣ ಪ್ರಚಾರ ನಡೆಸಲಿದ್ದಾರೆ.

ಪ್ರಧಾನಿ ಮೋದಿ ಈಗಾಗಲೇ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಚುನಾವಣ ಕಹಳೆ ಮೊಳಗಿಸಿದ್ದಾರೆ. ಆದರೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಇನ್ನೂ ರಾಜ್ಯದ ಅಖಾಡಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡಿರಲಿಲ್ಲ. ರಾಹುಲ್ ಗಾಂಧಿ ಆಗಮಿಸುವ ಮೂಲಕ ಪಕ್ಷದಲ್ಲಿ ಸಂಚಲನ ಮೂಡಿಸಲಿದ್ದಾರೆ.
Laxmi News 24×7