Breaking News

11 ಕೆಜಿ ಚಿನ್ನ, ₹54 ಕೋಟಿ ಮನೆ, ₹1 ಕೋಟಿಯ ಕಾರು. ಇದು ಕಾಂಗ್ರೆಸ್‌ ಗೀತಾ ಶಿವರಾಜ್‌ ಕುಮಾರ್‌ ಆಸ್ತಿ!

Spread the love

ಶಿವಮೊಗ್ಗ: 11 ಕೆಜಿ ಚಿನ್ನ, ₹54 ಕೋಟಿ ಮನೆ, ₹1 ಕೋಟಿಯ ಕಾರು… ಇದು ಶಿವಮೊಗ್ಗದಿಂದ ಎರಡನೇ ಬಾರಿ ಲೋಕಸಭಾ ಚುನಾವಣೆಗೆ ಕಣದಲ್ಲಿರುವ ಮಾಜಿ ಸಿಎಂ ಬಂಗಾರಪ್ಪರವರ ಮಗಳು ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡಮನೆ ಕರೆಸಿಕೊಳ್ಳುವ ಡಾ.ರಾಜ್‌ಕುಮಾರ್ ಸೊಸೆ, ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ಅವರ ಹೆಂಡ್ತಿಯ ಆಸ್ತಿಯಾಗಿದೆ.

11 ಕೆಜಿ ಚಿನ್ನ, ₹54 ಕೋಟಿ ಮನೆ, ₹1 ಕೋಟಿಯ ಕಾರು. ಇದು ಕಾಂಗ್ರೆಸ್‌ ಗೀತಾ ಶಿವರಾಜ್‌ ಕುಮಾರ್‌ ಆಸ್ತಿ!

ಇಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿರುವ ಆಸ್ತಿ ಅಫಿಡವಿಟ್‌ ವಿವರವಾಗಿದೆ. 40.04 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿರುವ ಗೀತಾ, ಪತಿ ಶಿವರಾಜ್‌ ಕುಮಾರ್‌ ಬಳಿ ಇದೆ 49 ಕೋಟಿ ರೂ. ಆಸ್ತಿ ಅಂತ ತಿಳಿಸಿದ್ದಾರೆ.ಒಟ್ಟಾರೆ ಪತಿ-ಪತ್ನಿ ಬಳಿ 89.04 ಕೋಟಿ ರೂ. ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಗೀತಾಶಿವರಾಜ್‌ಕುಮಾರ್‌. ಇದಲ್ಲದೇ 2022-23ರಲ್ಲಿ ತಮ್ಮ ವಾರ್ಷಿಕ ಆದಾಯ 1.48 ಕೋಟಿ ರೂ. ಎಂದು ಗೀತಾ ಶಿವರಾಜ್‌ ಕುಮಾರ್‌ ಹೇಳಿದ್ದು, ಪತಿ ಆದಾಯ 2.97 ಕೋಟಿ ರೂ. ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣವಿಲ್ಲ ಅಂತ ಉಲ್ಲೇಖ ಮಾಡಿದ್ದಾರೆ.

ಇನ್ನೂ ಶಿವಣ್ಣ ಬಳಿ 22,58,338 ರೂಪಾಯಿ ಕ್ಯಾಶ್ ಇದೆ. ಗೀತಾ ಅವರ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ ಅಂತ ಹೇಳಿದ್ದಾರೆ. ಗೀತಾ ಅವರ ಬಳಿಯಲ್ಲಿ ಬರೋಬ್ಬರಿ 11.54 ಕೆಜಿ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳಿವೆ. ಇದರ ಮೌಲ್ಯ 3.5 ಕೋಟಿ ರೂ. ಆಗಿದೆ. 30 ಕೆಜಿ ಬೆಳ್ಳಿಯೂ ಅವರ ಬಳಿ ಇದೆಯಂತೆ. ಇದಲ್ಲದೇ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಶಿವರಾಜ್ ಕುಮಾರ್‌ ಜಂಟಿ ಒಡೆತನದಲ್ಲಿ ಕನಕಪುರದಲ್ಲಿ 5.05 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಹೊಂದಿದ್ದಾರೆ. ಇದರ ಮೌಲ್ಯ ಒಟ್ಟು 3 ಕೋಟಿ ರೂ. ಎಂದು ಉಲ್ಲೇಖ ಮಾಡಿದ್ದಾರೆ. ಮಾನ್ಯತಾ ರೆಸಿಡೆನ್ಸಿಯಲ್ಲಿ ಬರೋಬ್ಬರಿ 1.48 ಎಕರೆಯಲ್ಲಿ ಜಂಟಿಯಾಗಿ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಮನೆ ಹೊಂದಿದ್ದು, ಇದರ ಮೌಲ್ಯವೇ 54 ಕೋಟಿ ರೂ. (ತಲಾ 27 ಕೊಟಿ ರೂ.) ಎಂದು ಹೇಳಿದ್ದಾರೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ