Breaking News
Home / Uncategorized / ಹೆಣ್ಮಕ್ಳೇ ಸ್ಟ್ರಾಂಗು ಗುರೂ… ರಾಜ್ಯಕ್ಕೆ ಟಾಪರ್ ಇವರೇ, ದ.ಕ ಪ್ರಥಮ, ಗದಗ ಜಿಲ್ಲೆ ಕೊನೆ ಸ್ಥಾನ

ಹೆಣ್ಮಕ್ಳೇ ಸ್ಟ್ರಾಂಗು ಗುರೂ… ರಾಜ್ಯಕ್ಕೆ ಟಾಪರ್ ಇವರೇ, ದ.ಕ ಪ್ರಥಮ, ಗದಗ ಜಿಲ್ಲೆ ಕೊನೆ ಸ್ಥಾನ

Spread the love

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ.

ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಪಾಸಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಟಾಪರ್ ಗಳು ಇವರೇ: ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ನಂತರ ಸ್ಥಾನದಲ್ಲಿ ಕೆ ಹೆಚ್ ಉರ್ವೀಶ್ ಪ್ರಶಾಂತ್ 597 ಅಂಕ, ವೈಭವಿ ಆಚಾರ್ಯ 597 ಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಮೂವರು ಟಾಪರ್​ಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ಡಿ. ಟಾಪರ್ 600ಕ್ಕೆ 596 ಅಂಕಗಳನ್ನು ಪಡೆದರೆ, ವಿಜಯಪುರದ ವೇದಾಂತ್ ಜ್ಞಾನುಭ ನವಿ ಮತ್ತು ಕವಿತಾ ಬಿ ವಿ 600ಕ್ಕೆ 596 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ 600ಕ್ಕೆ 597 ಅಂಕ ಪಡೆದು ಟಾಪರ್ ಆಗಿದ್ದಾರೆ. ಪವನ್ ಎಂ ಎಸ್ ಮತ್ತು ಹರ್ಷಿತ ಎಸ್ ಎಚ್ 596 ಅಂಕ ಪಡೆದಿದ್ದಾರೆ.

 

 

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗೆ 3.3 ಲಕ್ಷ ಹುಡುಗರು ಮತ್ತು 3.6 ಲಕ್ಷ ಹುಡುಗಿಯರು ಹಾಜರಾಗಿದ್ದರು. ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ದಕ್ಷಿಣ ಕನ್ನಡ ಟಾಪ್, ಗದಗ ಜಿಲ್ಲೆಗೆ ಕೊನೆಯ ಸ್ಥಾನ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 97.37 ಶೇಕಡ ದೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. 96.80 ಶೇಕಡದೊಂದಿಗೆ ಉಡುಪಿ ದ್ವಿತೀಯ ಸ್ಥಾನದಲ್ಲಿದ್ದರೆ, ಗದಗ ಜಿಲ್ಲೆ 72.86 ಶೇಕಡ ದೊಂದಿಗೆ ಕೊನೆಯ ಸ್ಥಾನದಲ್ಲಿದೆ.


Spread the love

About Laxminews 24x7

Check Also

3 ತಿಂಗಳಿಂದಲೇ ಅಂಜಲಿ ಹತ್ಯೆಗೆ ಪ್ಲಾನ್; ವಕೀಲರ ಬಳಿಯೂ ಮಾಹಿತಿ ಸಂಗ್ರಹ!

Spread the love ಹುಬ್ಬಳ್ಳಿ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹುಬ್ಬಳ್ಳಿಯ ಅಂಜಲಿ ಹತ್ಯೆಯ ಆರೋಪಿಯನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ. ಕೊಲೆ ಆರೋಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ