Breaking News

ಭೂಮಿ ತಾಪ ಇಳಿಸಲು ಸೂರ್ಯನಿಗೇ ಟಾರ್ಚ್‌!

Spread the love

ಭೂಮಿಯ ತಾಪಮಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಬೇಸಗೆಯಲ್ಲಂತೂ ಸೂರ್ಯನ ಶಾಖಕ್ಕೆ, ಬಿಸಿ ಗಾಳಿಗೆ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ಕೂಡ ಪರಿತಪಿಸುವಂತಾಗಿದೆ. ಭೂಮಿ ಯ ತಾಪವನ್ನು ತಾತ್ಕಾಲಿಕವಾಗಿ ಇಳಿಸಲು ಅಮೆರಿಕದ ವಿಜ್ಞಾನಿಗಳು ವಿನೂತನ ಪ್ರಯೋಗ ನಡೆಸಿದ್ದಾರೆ.

ಭೂಮಿಯ ವಾತಾವರಣ ತಂಪಾಗಿ ಸುವ ನಿಟ್ಟಿನಲ್ಲಿ “ಕ್ಲೌಡ್‌ ಬ್ರೈಟನಿಂಗ್‌’ ಎಂಬ ತಂತ್ರವನ್ನು ಬಳಸಿದ್ದಾರೆ. “ಕ್ಲೌಡ್‌ ಬ್ರೈಟನಿಂಗ್‌’ ತಂತ್ರವು ಮೋಡಗಳನ್ನು ಪ್ರಕಾಶಮಾನವಾಗುವಂತೆ ಮಾಡುತ್ತದೆ. ಇದರಿಂದ ಮೋಡಗಳು ಒಳಬರುವ ಸೂರ್ಯನ ಕಿರಣಗಳ ಸಣ್ಣ ಭಾಗವನ್ನು ಪ್ರತಿಫ‌ಲನಗೊಳಿಸುತ್ತದೆ.

ರಹಸ್ಯ ಪರೀಕ್ಷೆ: ಎ. 2ರಂದು ವಾಷಿಂಗ್ಟನ್‌ ವಿವಿ ಸಂಶೋ ಧಕರು ರಹಸ್ಯ ಪರೀಕ್ಷೆ ಯೊಂದನ್ನು ನಡೆಸಿದರು. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಿಷ್ಕ್ರಿಯಗೊಂಡ ವಿಮಾನವಾಹಕ ನೌಕೆಯ ಮೇಲೆ ಇರಿಸ ಲಾದ ಹಿಮ ಯಂತ್ರದಂತಹ ಸಾಧನ ದಿಂದ ಹೆಚ್ಚಿನ ವೇಗದಲ್ಲಿ ಉಪ್ಪಿನ ಕಣ ಗಳನ್ನು ಆಕಾಶಕ್ಕೆ ಹಾರಿಸಿದರು. ಇದ ರಿಂದ ಮೋಡಗಳು ಕನ್ನಡಿಯಂತೆ ಸೂರ್ಯನ ಕಿರಣಗಳನ್ನು ಪ್ರತಿಫ‌ಲನ ಗೊಳಿಸಿತು. ಇದು ಆ ಪ್ರದೇಶವನ್ನು ತಂಪಾಗಿಸಿತು.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ