ಕಾಗವಾಡ: ತಾಲ್ಲೂಕಿನ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಚಿಕ್ಕೋಡಿ ಉಪವಿಭಾಗಾಧಿಕಾರಿ ಮೆಹಬೂಬಿ ಭೇಟಿ ನೀಡಿ, ಮಹಾರಾಷ್ಟ್ರದಿಂದ ಬರುವ ಖಾಸಗಿ ವಾಹನ ಮತ್ತು ಸರ್ಕಾರಿ ಬಸ್‌ಗಳನ್ನು ತಡೆದು, ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 20 ಲಕ್ಷಕ್ಕಿಂತ ಹೆಚ್ಚು ನಗದು ಜಪ್ತಿಯಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ವೆಬ್‌ಕಾಸ್ಟ್ ಕ್ಯಾಮೆರಾ, ಕುಡಿಯುವ ನೀರಿನ ವ್ಯವಸ್ಥೆ, ದೀಪದ ವ್ಯವಸ್ಥೆ ಮಾಡಲಾಗಿದ್ದು, ಅಕ್ರಮ ಸಾಗಾಟ ತಡೆಗಟ್ಟಲು, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಐವತ್ತು ಸಾವಿರಕ್ಕಿಂತ ಹೆಚ್ಚು ನಗದು ಸಾಗಾಟ ಮಾಡಬಾರದು ಎಂದು ತಿಳಿಸಿದರು. ಚೆಕ್‌ಪೋಸ್ಟ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದರು.
ಕಾಗವಾಡ ತಾಲ್ಲೂಕು ದಂಡಾಧಿಕಾರಿ ಎಸ್.ಬಿ. ಇಂಗಳೆ, ಸಿಪಿಐ ರವೀಂದ್ರ ನಾಯಕವಾಡಿ, ಚುನಾವಣೆ ಅಧಿಕಾರಿ ಬಸಪ್ಪ ಪೂಜಾರ, ಕಂದಾಯ ನಿರೀಕ್ಷಕ ಎಸ್.ಬಿ. ಮುಲ್ಲಾ ಇದ್ದರು.