Breaking News

ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ

Spread the love

ವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನದ ಬಳಿಕ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar)​ ಪಿಆರ್​ಕೆ ಪ್ರೊಡೆಕ್ಷನ್ (PRK Production) ಸಂಪೂರ್ಣ ಹೊಣೆ ಹೊತ್ತಿದ್ದಾರೆ. ​ ನಿರ್ಮಾಪಕಿಯಾಗಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದ್ದಾರೆ.

ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲೆಂದೇ ಪುನೀತ್ ರಾಜ್​ಕುಮಾರ್ ಪಿಆರ್​ಕೆ ಪ್ರೊಡೆಕ್ಷನ್ ಶುರು ಮಾಡಿದ್ರು. ಇದೀಗ ಅಪ್ಪು ಕನಸನ್ನು ಅಶ್ವಿನಿ ನನಸು ಮಾಡ್ತಿದ್ದಾರೆ. ಒಳ್ಳೆ ಕಥೆ ಹಾಗೂ ಪ್ರತಿಭಾವಂತರನ್ನು (Talented) ಹುಡುಕಿ ಅವಕಾಶ ನೀಡ್ತಿದ್ದಾರೆ. ನಿರ್ದೇಶಕಿಯರಿಗೆ, ಮಹಿಳಾ ತಂತ್ರಜ್ಞರಿಗೆ ಅವಕಾಶ ನೀಡುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್​ ಐಷಾರಾಮಿ ಕಾರು (Luxury Car) ಖರೀದಿ ಮಾಡಿದ್ದಾರೆ.

ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ

ಪುನೀತ್​ ರಾಜ್​ಕುಮಾರ್ ಅವರಿಗೂ ಐಷಾರಾಮಿ ಕಾರಿನ ಕ್ರೇಜ್​ ಇತ್ತು. ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರಿನ ಜೊತೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ನಿಂತಿರುವ ಫೋಟೋವನ್ನು ಆಡಿ ಬೆಂಗಳೂರು ಫೇಸ್​ಬುಕ್ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ.

ಅಶ್ವಿನಿ ಪುನೀತ್ ಖರೀದಿಸಿದ ಕಾರಿನ ಬೆಲೆ ಎಷ್ಟು?

ಗ್ರೇ ಬಣ್ಣದ ಆಡಿ ಕ್ಯೂ 7 ಕಾರನ್ನು ಅಶ್ವಿನಿ ಪುನೀತ್​ರಾಜ್​ಕುಮಾರ್ ಖರೀದಿ ಮಾಡಿದ್ದು ಈ ಕಾರಿನ ಬೆಲೆ 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳ ವರೆಗೂ ಇದೆ ಎನ್ನಲಾಗ್ತಿದೆ. ಅಶ್ವಿನಿ ಅವರು ಆಡಿ ಕ್ಯೂ7 ಟಾಪ್ ಎಂಡ್ ಮಾಡೆಲ್ ಅನ್ನೇ ಖರೀದಿಸಿದ್ದಾರೆ ಎನ್ನಲಾಗಿದೆ.

 

 

ಅಶ್ವಿನಿ ಪುನೀತ್ ರಾಜ್​ಕುಮಾರ್ ಖರೀದಿ ಮಾಡಿರುವ ಐಷಾರಾಮಿ ಆಡಿ ಕ್ಯೂ 7 ಕಾರು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಈ ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಏರ್ ಬ್ಯಾಗ್​ಗಳು, ಕ್ಯಾಮೆರಾ, ಅಡಾಸ್ ತಂತ್ರಜ್ಞಾನ, ರೋಡ್​ ಗ್ರಿಪ್​ನ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ