Breaking News

ಹಿಂದುತ್ವದ ವಿಷ ಬೀಜ ಬಿತ್ತುವುದೇ ಬಿಜೆಪಿ ಸಾಧನೆ: ಸುನೀಲ್ ಬೋಸ್

Spread the love

ಮೈಸೂರು: ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತೇವೆ. ಹತ್ತು ವರ್ಷದಲ್ಲಿ ಬಿಜೆಪಿ ಏನು ಮಾಡಿದೆ? ರಾಮ ಮಂದಿರ ಕಟ್ಟಿದ್ದೆ ಸಾಧನೆ. ಅಣ್ಣ ತಮ್ಮಂದಿರಂತೆ ಬದುಕುವವರ ಮಧ್ಯೆ ಬಿಜೆಪಿ ಹಿಂದುತ್ವದ ವಿಷ ಬೀಜ ಬಿತ್ತಿದೆ. ಆ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದೇ ಅವರ ಸಾಧನೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೇಳಿದರು.

Mysore; ಹಿಂದುತ್ವದ ವಿಷ ಬೀಜ ಬಿತ್ತುವುದೇ ಬಿಜೆಪಿ ಸಾಧನೆ: ಸುನೀಲ್ ಬೋಸ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲೆಡೆ ಟಿಕೆಟ್ ಘೋಷಣೆ ಮಾಡಿ ಕೊನೆಯಲ್ಲಿ ನಮ್ಮ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ ಅಷ್ಟೆ. ನಮ್ಮಲ್ಲಿ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಇದ್ದು, ಹನೂರಿನಲ್ಲಿ ಕೂಡ ನಮ್ಮ ಬಲ ಹೆಚ್ಚಿದೆ. ಇದು ನನ್ನ ಗೆಲುವಿಗೆ ಅನುಕೂಲವಾ ಗಲಿದೆ. ಕಳೆದ ಬಾರಿ ಕೂಡ ನಾವು ಕಡಿಮೆ ಅಂತರದಲ್ಲಿ ಸೋತಿದ್ದೇವೆ. ನಮ್ಮಲ್ಲಿ ಯಾವುದೇ ಒಳ ಜಗಳ, ಬಣ ರಾಜಕೀಯ ಇಲ್ಲ ಎಂದರು.

ಬಣಗಳು ಇದ್ದಿದ್ದರೆ ದರ್ಶನ್ ಧ್ರುವನಾರಾಯಣ್ 45 ಸಾವಿರ ಮತದಿಂದ ಗೆಲ್ಲುತ್ತಿರಲಿಲ್ಲ. ಈಗ ಶಾಸಕ ದರ್ಶನ್ ಮುಂದಾಳತ್ವದಲ್ಲೇ ಅಲ್ಲಿ ಪ್ರಚಾರ ಮಾಡುತ್ತಾರೆ. ದೊಡ್ಡವರಿಗೆ ಮುನಿಸಿಲ್ಲ, ಆದರೆ ಸ್ಥಳೀಯವಾಗಿ ಭಿನ್ನಾಭಿಪ್ರಾಯ ಇರಬಹುದು. ಹಾಗಂತ ಯಾರೂ ಮನೆ ಒಡೆಯುವ ಕೆಲಸ ಮಾಡುವುದಿಲ್ಲ. ದರ್ಶನ್ ಕೂಡ ನಮಗೆ ಬಂದಷ್ಟು ಲೀಡ್ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದರು.

ಹಿರಿಯ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಬೆಂಬಲ ಕೋರಿದ್ದೇನೆ. ಅವರ ಬೆಂಬಲ ಸಿಗುವ ನಿರೀಕ್ಷೆಯಿದೆ ಎಂದು ಸುನೀಲ್ ಬೋಸ್ ಹೇಳಿದರು.


Spread the love

About Laxminews 24x7

Check Also

ಬಿಹಾರ ಫಲಿತಾಂಶ ಬಳಿಕ ಸಂಪುಟ ಪುನಾರಚನೆ?

Spread the love ಬೆಂಗಳೂರು: ಸಿಎಂ ಸಿದ್ದರಾಮಯ್ಯ ಈಗಾಗಲೇ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ. ಈ ನಿಟ್ಟಿ‌ನಲ್ಲಿ ಚರ್ಚೆ ನಡೆಸಲು ನ.15ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ