ಕುಡಿಯುವ ನೀರಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಕೊಪ್ಪಳ: ರಾಜ್ಯದಲ್ಲಿ ಒಂದೆಡೆ ತೀವ್ರ ಬರಗಾಲ. ಮತ್ತೊಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕೊಪ್ಪಳದ ಬೀಸರಹಳ್ಳಿಯಲ್ಲಿ ಹಿರಿಯ ನಾಗರಿಕರು ಕುಡಿಯುವ ನೀರಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಕೊಡ ಹಿಡಿದು ಉಪವಾಸ ಸತ್ಯಾಗ್ರಹ ಆರಂಭಿಸಿರುವ ಹಿರಿಯ ನಾಗರಿಕರು, ತಮ್ಮ ಜೀವ ಹೋದರ್ ಚಿಂತೆ ಇಲ್ಲ, ನೀರು ಸಿಗುವವರೆಗೂ ಸತ್ಯಾಗ್ರಹ ನಿಲ್ಲಿಸಲ್ಲ ಎಂದು ಪಟ್ತು ಹಿಡಿದಿದ್ದಾರೆ.

ಬೀಸರಹಳ್ಳಿ ಗ್ರಾಮದಲ್ಲಿ ಹನಿ ನೀರಿಗೂ ತತ್ವಾರ ಎದುರಾಗಿದೆ. ವಾರಕ್ಕೊಮ್ಮೆಯೂ ಕುಡಿಯುವ ನೀರಿನ ಪೂರೈಕೆ ಇಲ್ಲ. ಅಧಿಕರಿಗಳಿಗೆ ಗ್ರಾಮ ಪಂಚಾಯಿತಿಗಳಿತೆ ಹಲವು ಬಾರಿ ಮನವಿ ಮಾಡಿದರೂ ಅಧಿಕರಿಗಳು ಕ್ಯಾರೇ ಎನ್ನುತ್ತಿಲ್ಲ.
Laxmi News 24×7