ನೇಸರಗಿ: ಸಮೀಪದ ವಣ್ಣೂರ ಗ್ರಾಮದಲ್ಲಿ ಪ್ರಭುದೇವರ ಮೂರ್ತಿ ಪ್ರತಿಷ್ಠಾಪನೆ, ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮಾರ್ಚ್ 28ರಿಂದ ಏಪ್ರಿಲ್ 1ರ ವರೆಗೆ ನಡೆಯಲಿದೆ.
’28ರಂದು ಗ್ರಾಮದ ಪ್ರಭುದೇವರ ಮೂರ್ತಿಗಳ ಮೆರವಣಿಗೆ, 30ರಂದು ಪ್ರಭುದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ವೀರಭದ್ರೇಶ್ವರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಏಪ್ರಿಲ್ 1ರಂದು ಬಾಳೆಹೊನ್ನೂರ ರಂಭಾಪುರಿ ಶ್ರೀ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಸಮಾರಂಭ ನಡೆಯಲಿದೆ’ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
Laxmi News 24×7