Breaking News

ಮೈಸೂರು ಅರಮನೆ ಮುಂದೆ ರಂಗೋಲಿಯಲ್ಲಿ ಅರಳಿದ ಅಪ್ಪು,

Spread the love

 ಹಸರು ಚಿಕ್ಕ ಮಗುವಿನಿಂದ ಹಿಡಿದು ಅಜ್ಜಂದಿರವರ ಮನಸ್ಸಲ್ಲಿ ಅಚ್ಚಳಿಯದೇ ಅಚ್ಚಹಸಿರಿನ ಗಿಡ, ಮರದಂತೆ ನೆಲೆಸಿಬಿಟ್ಟಿದ್ದಾರೆ. ಈ ಮೂಲಕ ಅವರು ಅಜರಾಮರಾಗಿಬಿಟ್ಟಿದ್ದಾರೆ. ಆ ಅದ್ಭುತ ಹೆಸರೇ ಅಪ್ಪು (ಪುನೀತ್ ರಾಜ್‌ಕುಮಾರ್‌). ಇನ್ನು ಇಂದು (ಮಾರ್ಚ್‌ 17) ಪುನೀತ್‌ ರಾಜ್‌ಕುಮಾರ್ ಅವರ 49ನೇ ವರ್ಷದ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ.
ಹಾಗೆಯೇ ಇಲ್ಲೊಬ್ಬ ಅಭಿಮಾನಿಯೊಬ್ಬರು ಅವರ ಚಿತ್ರ ಬಿಡಿಸುವ ಮೂಲಕ ವಿಶೇಷವಾಗಿ ಶುಭಕೋರಿದ್ದಾರೆ.ಮೈಸೂರು ಅರಮನೆ ಮುಂದೆ ರಂಗೋಲಿಯಲ್ಲಿ ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್ ಅವರ ಚಿತ್ರವನ್ನು ಅಭಿಮಾನಿಯೊಬ್ಬರು ಅದ್ಭುತವಾಗಿ ಬಿಡಿಸಿದ್ದು, ಇದರ ಮೇಲೆ ಪಕ್ಷಿಗಳು ಹಾರಾಡುವ ಅದ್ಭುತ ದೃಶ್ಯವಂತೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.
ಮೈಸೂರು ಅರಮನೆ ಮುಂದೆ ರಂಗೋಲಿಯಲ್ಲಿ ಅರಳಿದ ಅಪ್ಪು, ಪ್ರತಿಕ್ರಿಯೆಗಳು ಹೇಗಿವೆ ಗೊತ್ತಾ?
ಅಲ್ಲದೆ ಈ ವಿಡಿಯೋಗೆ “ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ” ಎನ್ನುವ ಹಾಡನ್ನು ಹಾಕಿದ್ದು, ಇದಕ್ಕೆ ಪ್ರತಿಕ್ರಿಯೆಗಳ ಸರಮಾಲೆಯೇ ಹರಿದುಬರುತ್ತಿದೆ. ಈ ದೃಶ್ಯವನ್ನು ಗಮನಿಸಿದರೆ ರಾಜಕುಮಾರ್‌ ಸಿನಿಮಾದಲ್ಲಿ ಪುನೀತ್‌ ಹೆಗಲ ಮೇಲೆ ಪಾರಿವಾಳ ಹಾರಿಬಂದು ಕುಳಿತಂತಿದೆ.
ಈ ಬಗ್ಗೆ ಮಾತನಾಡಿದ ಚಿತ್ರ ಬಿಡಿಸಿದ ಕಲೆಗಾರ ಮಾತನಾಡಿದ್ದು, ನನ್ನ ಹೆಸರು ಕೂಡ ಪುನೀತ್‌ ಅಂತಾ, ಇವತ್ತು ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ ಹಿನ್ನೆಲೆ ನಾನು, ನಮ್ಮ ಮನೆಯವರು ಈ ಚಿತ್ರವನ್ನು ಅಪ್ಪು ಅವರಿಗಾಗಿ ಬಿಡಿಸಿದ್ದೇವೆ ಎಂದು ಹೇಳಿದ್ದಾರೆ.

Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ