ಚಿಕ್ಕಬಳ್ಳಾಪುರ:- ಪೋಕ್ಸೋ ಕೇಸ್ ಗೆ ಸಂಬಧಪಟ್ಟಂತೆ ಯಡಿಯೂರಪ್ಪ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಪ್ರಕರಣವನ್ನು ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ತನಿಖೆಯಲ್ಲಿ ಏನು ವರದಿ ಬರುತ್ತೆ ಅದು ಆಗೇ ಆಗುತ್ತೆ.
ಸರಿ ಇದ್ದರೆ ಸರಿ, ತಪ್ಪಿದ್ದರೆ ತಪ್ಪು. ಅದಕ್ಕೆ ಯಾರೂ ಹೊರತಲ್ಲ. ತಪ್ಪಾಗಿದ್ದರೆ ಪೋಕ್ಸೋ ಅಡಿಯಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ತನಿಖಾ ವರದಿ ಬಂದ ಮೇಲೆ ಸತ್ಯ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಅವರ ಸಂಬಂಧಿ ಪುರುಷರೇ ಕಾರಣ. ಎಳೆವಯಸ್ಸಿನ ಮಕ್ಕಳನ್ನು ಗರ್ಭಿಣಿ ಮಾಡಿ ನರಕಕ್ಕೆ ದೂಡುತ್ತಿದ್ದಾರೆ. 7, 8ನೇ ತರಗತಿ ಓದುವಾಗ ಗರ್ಭಿಣಿಯಾದರೆ ಏನು ಮಾಡುವುದು. ಹೆಣ್ಣುಮಕ್ಕಳ ಮೇಲೆ ತಂದೆ, ತಾಯಿ ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ.