Breaking News

ಅಣ್ಣಾಮಲೈ ವಾರ್ನಿಂಗ್, ದಳಪತಿ ವಿಜಯ್‌ ಜೊತೆ ಏನಿದು ಕಿರಿಕ್?

Spread the love

ಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಹವಾ ಬಲು ಜೋರಾಗಿದ್ದು, ಲೋಕಸಭೆಗೂ ಮೊದಲು ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಗೆಲುವಿಗಾಗಿ ಎನ್‌ಡಿಎ & ಇಂಡಿಯಾ ಮೈತ್ರಿಕೂಟಗಳ ನಡುವೆ ತಿಕ್ಕಾಟ ಬಲು ಜೋರಾಗಿರುವ ಸಮಯದಲ್ಲೇ ನಟ ದಳಪತಿ ವಿಜಯ್ ಕೊಟ್ಟಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.ಹಾಗೇ ವಿಜಯ್ ಅವರು ಕೊಟ್ಟಿದ್ದ ಹೇಳಿಕೆಗೆ ಈಗ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಅಣ್ಣಾಮಲೈ.2024ರ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ & ಇಂಡಿಯಾ ಮೈತ್ರಿಕೂಟಗಳ ನಡುವೆ ಭಾರಿ ಪೈಪೋಟಿ ನಿರೀಕ್ಷೆ ಮಾಡಲಾಗುತ್ತಿದೆ. ಎರಡೂ ಪಕ್ಷಗಳ ನಾಯಕರ ನಡುವೆ ಮಾತಿನ ಮಹಾಯುದ್ಧ ಕೂಡ ನಡೆಯುತ್ತಿದೆ. ಅದ್ರಲ್ಲೂ ತಮಿಳುನಾಡು ರಾಜಕೀಯದಲ್ಲಿ ಬಿಜೆಪಿ ಈ ಬಾರಿ ತನ್ನ ಬಾವುಟ ನೆಟ್ಟೇ ನೆಡುತ್ತದೆ ಎಂಬ ನಂಬಿಕೆ ಬಿಜೆಪಿ ಹೈಕಮಾಂಡ್‌ಗೆ ಇದೆ. ಹೀಗಿದ್ದಾಗಲೇ ನಟ ವಿಜಯ್ ಮತ್ತು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ನಡುವೆ ತಿಕ್ಕಾಟ ಬಲು ಜೋರಾಗಿದೆ.

ಹಾಗಾದರೆ ಇದೀಗ, ಅಣ್ಣಾಮಲೈ ಅವರು ನಟ ವಿಜಯ್ ಅವರಿಗೆ ನೀಡಿದ ಎಚ್ಚರಿಕೆ ಏನು? ರಾಜಕೀಯ ಸಲಹೆ ಪಡೆಯಿರಿ!ನಟ ವಿಜಯ್ ಅವರು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ, ಹೇಳಿಕೆ ಒಂದನ್ನ ನೀಡಿದ್ದರು. ಈ ಬಗ್ಗೆ ಈಗ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಗರಂ ಆಗಿದ್ದು, ನಟ ವಿಜಯ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇರುವ ಸಮಯದಲ್ಲಿ ಹೀಗೆ ಅಣ್ಣಾಮಲೈ ನೀಡಿರುವ ಹೇಳಿಕೆ ಭಾರಿ ಕುತೂಹಲ ಕೆರಳಿಸಿದೆ.

ಹಾಗಾದರೆ ಅಣ್ಣಾಮಲೈ ಅವರು ನೀಡಿರುವ ಹೇಳಿಕೆ ಏನು ಗೊತ್ತೆ? ಮುಂದೆ ಓದಿ. ವಿಜಯ್ VS ಅಣ್ಣಾಮಲೈ!ನಟ ದಳಪತಿ ವಿಜಯ್ ಇತ್ತೀಚೆಗೆ ತಮಿಳುನಾಡು ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷವನ್ನ ಸ್ಥಾಪನೆ ಮಾಡಿದ್ದರು. ಈ ಮೂಲಕ ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಗೆ, ರಾಜಕೀಯ ಅಖಾಡ ಪ್ರವೇಶ ಮಾಡುತ್ತಿರುವ ಘೋಷಣೆ ಹೊರಡಿಸಿದ್ದರು.

‘ತಮಿಳಗ ವೆಟ್ರಿ ಕಳಗಂ’ ಎಂಬ ಹೆಸರನ್ನು ತಮ್ಮ ಹೊಸ ರಾಜಕೀಯ ಪಕ್ಷಕ್ಕೆ ಇಟ್ಟಿರುವ ನಟ ವಿಜಯ್ ಈಗ ಕೇಂದ್ರ ಸರ್ಕಾರದ ಸಿಎಎ ವಿರುದ್ಧ ಮಾತನಾಡಿದ್ದರು. ಆ ವಿಚಾರವಾಗಿ ಇದೀಗ ಅಣ್ಣಾಮಲೈ ಅವರು ಪ್ರತಿಕ್ರಿಯೆ ನೀಡಿದ್ದು, ನೀವು ಒಂದೇ ವಾಖ್ಯದಲ್ಲಿ ಮಾತನಾಡಿ ರಾಜಕೀಯ ಮಾಡಲು ಆಗುವುದಿಲ್ಲ. ಹೀಗಾಗಿ ನೀವು ಒಳ್ಳೆಯ ರಾಜಕೀಯ ಸಲಹೆಗಾರರನ್ನು ಇಟ್ಟುಕೊಳ್ಳಿ ಅಂತಾ ಹೇಳಿದ್ದಾರೆ.ಒಟ್ನಲ್ಲಿ ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ & ಅಣ್ಣಾಮಲೈ ನಡುವೆ ಮೆಲ್ಲಗೆ ತಿಕ್ಕಾಟ ಶುರುವಾದಂತೆ ಕಾಣುತ್ತಿದೆ. ಅದರಲ್ಲೂ ಲೋಕಸಭೆ ಚುನಾವಣೆ ಹತ್ತಿರವೇ ಇರುವಾಗ ಇಬ್ಬರ ನಡುವಿನ ಈ ಮಾತಿನ ಯುದ್ಧ ಸಾಕಷ್ಟು ಗಮನ ಕೂಡ ಸೆಳೆದಿದೆ. ಈ ಮೂಲಕ ಅಣ್ಣಾಮಲೈ ನೀಡಿರುವ ಹೇಳಿಕೆಗೆ ಈಗ ನಟ ವಿಜಯ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳು ಸಬಲೀಕರಣಗೊಂಡರೆ ನಿಜವಾದ ಗ್ರಾಮ ಸ್ವರಾಜ್ : ಚನ್ನರಾಜ ಹಟ್ಟಿಹೊಳಿ

Spread the love ಗ್ರಾಮ ಪಂಚಾಯಿತಿಗಳು ಸಬಲೀಕರಣಗೊಂಡರೆ ನಿಜವಾದ ಗ್ರಾಮ ಸ್ವರಾಜ್ : ಚನ್ನರಾಜ ಹಟ್ಟಿಹೊಳಿ ಖಾನಾಪುರ: ಗ್ರಾಮ ಪಂಚಾಯಿತಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ