Breaking News

ಪ್ರತಿಜೀವಕ ಔಷಧ ದುರ್ಬಳಕೆ ತಡೆಗಟ್ಟಿ’

Spread the love

ನ್ನಮ್ಮನ ಕಿತ್ತೂರು: ‘ಪ್ರತಿಜೀವಕ (ಆಯಂಟಿ ಬಯೊಟಿಕ್) ಔಷಧಗಳನ್ನು ಹೆಚ್ಚು ಉಪಯೋಗ ಮಾಡುತ್ತಿರುವ ಕ್ರಮದಿಂದಾಗಿ ರೋಗಿಗಳ ಪಾಲಿಗೆ ತಂದೊಡ್ಡುವ ಅಪಾಯ ತಪ್ಪಿಸಬೇಕಿದೆ. ಇವುಗಳ ದುರ್ಬಳಕೆಯನ್ನೂ ತಡೆಗಟ್ಟಬೇಕಿದೆ’ ಎಂದು ಬೆಳಗಾವಿ ವಿಭಾಗದ ಔಷಧ ಉಪನಿಯಂತ್ರಕ ಎಸ್. ನಾಗರಾಜ್ ಸಲಹೆ ನೀಡಿದರು.

 

ತಾಲ್ಲೂಕಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ನಿರಂತರ ಕಲಿಕಾ ಕಾರ್ಯಕ್ರಮದಡಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರತಿಜೀವಕ ಔಷಧಗಳ ದುರುಪಯೋಗ ಪಡೆಯಲು ಔಷಧ ವ್ಯಾಪಾರಿಗಳು ಮತ್ತು ವೈದ್ಯರ ಸಹಕಾರ ಹೆಚ್ಚಾಗಿ ಬೇಕು. ಈ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಔಷಧ ವ್ಯಾಪಾರಿಗಳ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ಬಿಕ್ಕಣ್ಣವರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ಜಿ. ಕುಲಕರ್ಣಿ, ಔಷಧ ವ್ಯಾಪಾರಿಗಳ ಸಂಘದ ಸದಸ್ಯರಾದ ಬಸವರಾಜ ಅಳೇನವರ, ರಾಜಶೇಖರ ಕೋಟಿ, ಶಶಿಕಾಂತ ಮಾರಿಹಾಳ, ಮಹೇಶ ಕುಬಸದ, ಜಮಾದಾರ, ಬಜೆಣ್ಣವರ, ಕಾಳಾಯಿ, ಸೌದಾಗರ ಇದ್ದರು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ