ನವದೆಹಲಿ, ಮಾರ್ಚ್ 11: ಜನವರಿಯಲ್ಲಿ ಶೇ. 5.1ರಷ್ಟಿರುವ ಹಣದುಬ್ಬರ ಫೆಬ್ರುವರಿಯಲ್ಲೂ ಮುಂದುವರಿದಿರುವ ಸಾಧ್ಯತೆ ಇದೆ ಎಂದು ವಿವಿಧ ಆರ್ಥಿಕ ತಜ್ಞರು (economists poll) ಅಭಿಪ್ರಾಯಪಟ್ಟಿದ್ದಾರೆ.
ರಾಯ್ಟರ್ಸ್ ನಡೆಸಿದ 15 ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಫೆಬ್ರುವರಿ ತಿಂಗಳಲ್ಲಿ ಹಣದುಬ್ಬರ (India inflation) ಶೇ. 5.1ರಷ್ಟಿರಬಹುದು ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಆರ್ಬಿಐ ನಿಗದಿ ಮಾಡಿರುವ ಹಣದುಬ್ಬರ ತಾಳಿಕೆ ಮಿತಿಯಾದ ( ಶೇ. 6ರ ಒಳಗೆ ಹಣದುಬ್ಬರ ಇರಲಿದೆ.
ಮಾರ್ಚ್ 12, ಮಂಗಳವಾರ ಸಂಜೆ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಫೆಬ್ರುವರಿ ತಿಂಗಳ ರೀಟೇಲ್ ಹಣದುಬ್ಬರ ಮತ್ತು ಐಐಪಿ ದತ್ತಾಂಶವನ್ನು ಬಿಡುಗಡೆ ಮಾಡಲಿದೆ. ಅದಕ್ಕೆ ಮುಂಚೆ ಆರ್ಥಿಕ ತಜ್ಞರು ದೇಶದ ವಿವಿಧ ಸೂಚಕಗಳನ್ನು ಆಧರಿಸಿ ಹಣದುಬ್ಬರ ಎಷ್ಟಿರಬಹುದು ಎಂದು ಅಂದಾಜು ಮಾಡಿದ್ದಾರೆ.