Breaking News

ಮದುವೆಯಾಗಿ ಆಗಷ್ಟೇ 7 ತಿಂಗಳ ಗರ್ಭಿಣಿ, ಗಂಡ ವಿಧಿವಶವಾದಾಗ ಬದುಕು ಆಕೆಗೆ ಪಾಠ ಕಲಿಸಿತ್ತು! ಇಂದು ಅಮೆರಿಕನ್ನರ ಮೆಚ್ಚುಗೆ ಗಳಿಸಿದ್ದಾರೆ!

Spread the love

ಆಕೆಗೆ ಮದುವೆಯಾಗಿ ಆಗಷ್ಟೇ ಏಳು ತಿಂಗಳ ಗರ್ಭಿಣಿ ಈ ಸಂದರ್ಭದಲ್ಲಿ ಗಂಡ ಮೃತಪಡುತ್ತಾರೆ. ಇದಾದ ಬಳಿಕ ದಿಕ್ಕೇ ತೋಚದಾದ ಮಹಿಳೆ ಜೀವನವೇ ನಿಂತು ಹೋಯ್ತು ಅಂತಾ ಶಾಕ್ ಗೆ ಒಳಗಾಗಿ ಬಿಡ್ತಾಳೆ. ಆದ್ರೇ ಈ ಶಾಕ್ ನಿಂದ ಹೊರ ಬಂದು ಮೂರನೇ ಕ್ಲಾಸ್ ಪಾಸ್ ಆಗಿದ್ದ ಆಕೆ ಶುರು ಮಾಡಿದ್ದು ತಾನೇ ಕಲ್ತಿದ್ದ ಕಸುಬು. ಕೌದಿ ಹೊಲಿಯಲು ಆರಂಭಿಸಿದ ಆಕೆ ಇದೀಗ ವರ್ಷಕ್ಕೆ 50-60 ಲಕ್ಷ ರೂಪಾಯಿ ದುಡಿಯುವ ಹೆಣ್ಣು ಮಗಳು…

ಹೌದು ಕಷ್ಟಕಾಲದಲ್ಲಿ ಬದುಕಿನ ಬಂಡಿ ದೂಡಲು ನೆರವಾಗಲೆಂದು ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಹಳ್ಳಿಯಲ್ಲಿ ಮಹಿಳೆಯರು ಸಿದ್ಧಪಡಿಸಲು ಆರಂಭಿಸಿದ ‘ಕೌದಿ’ಗಳಿಗೆ ಭಾರತವಷ್ಟೇ ಅಲ್ಲ; ಈಗ ವಿದೇಶದಿಂದಲೂ ಬೇಡಿಕೆ ಬಂದಿದೆ. ಪ್ರಸಕ್ತ ವರ್ಷ 650 ಕೌದಿಗಳು ಮಾರಾಟವಾಗಿವೆ.

ಮದುವೆಯಾಗಿ ಆಗಷ್ಟೇ 7 ತಿಂಗಳ ಗರ್ಭಿಣಿ, ಗಂಡ ವಿಧಿವಶವಾದಾಗ ಬದುಕು ಆಕೆಗೆ ಪಾಠ ಕಲಿಸಿತ್ತು! ಇಂದು ಅಮೆರಿಕನ್ನರ ಮೆಚ್ಚುಗೆ ಗಳಿಸಿದ್ದಾರೆ!

ಈ ಪೈಕಿ 150 ಕೌದಿಗಳು ಅಮೆರಿಕನ್ನರ ಮನೆ ಸೇರಿವೆ. ರಾಜ್ಯದ ವಿವಿಧೆಡೆ ಸೀರೆ, ಹರಿದ ಅಂಗಿ, ಪ್ಯಾಂಟ್‌, ಧೋತರ ಹೀಗೆ… ವಿವಿಧ ಹಳೆ ಬಟ್ಟೆಗಳನ್ನು ಬಳಸಿ, ಕೌದಿ ತಯಾರಿಸಲಾಗುತ್ತಿದೆ. ಆದರೆ, ಚಿಕ್ಕಾಲಗುಡ್ಡದಲ್ಲಿ ರಾಜಸ್ಥಾನದ ಜೈಪುರ, ಬೆಳಗಾವಿ ತಾಲೂಕಿನ ಹುದಲಿ ಮತ್ತಿತರ ಖಾದಿ ಉತ್ಪಾದನಾ ಸಂಘಗಗಳಿಂದ ಹೊಸ ಕಾಟನ್‌ ಬಟ್ಟೆ ಖರೀದಿಸಿ, ಕೌದಿ ತಯಾರಿಸಲಾಗುತ್ತಿದೆ. ಆಧುನಿಕ ಶೈಲಿಗೆ ತಕ್ಕಂತೆ, ಅವುಗಳ ಮೇಲೆ ವಿವಿಧ ಹೂವುಗಳು, ತೇರು, ಪಗಡೆ ಮನೆ, ನಕ್ಷತ್ರ ಮತ್ತಿತರ ವಿನ್ಯಾಸ ತೆಗೆಯಲಾಗುತ್ತಿದೆ ಮಾತಾ ಸಾವಿತ್ರಿಬಾಯಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಾರವ್ವ ಧಾರೋಜಿ ಆರಂಭದಲ್ಲಿ ಬ್ಯಾಂಕ್‌ನಲ್ಲಿ ₹5 ಲಕ್ಷ ಸಾಲ ಪಡೆದು, 10 ವರ್ಷಗಳ ಹಿಂದೆ ಕೌದಿ ತಯಾರಿಕೆ ಆರಂಭಿಸಿದ್ದರು. ತಾವು ತಯಾರಿಸಿದ ಉತ್ಪನ್ನಗಳನ್ನು ಸ್ಥಳೀಯ ಮಟ್ಟದಲ್ಲೇ ಮಾರುತ್ತಿದ್ದರು. ಆದರೆ, ಇನ್ಫೊಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ಈ ಕೌದಿಗಳಿಗೆ ಎಲ್ಲಿಲ್ಲದ ಬೇಡಿಕೆ ತಂದುಕೊಟ್ಟರು. ಅಲ್ಲಿಂದ ಕೌದಿಗೆ ವಿದೇಶದಲ್ಲಿಯೂ ಬಂತೂ ಎಲ್ಲಿಲ್ಲದ ಬೇಡಿಕೆ. ಇದರಿಂದ ಶಾರವ್ವನ ಬದುಕು ಬದಲಾಯಿತು…


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ