ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪೂಡ್ತಾ ಸಭೆಯಲ್ಲಿ ಖಾರಿಫ್ ಹಂಗಾಮಿಗೆ ರಸಗೊಬ್ಬರ ಸಬ್ಸಿಡಿಗೆ ಅನುಮೋದನೆಯನ್ನು ನೀಡಲಾಗಿದೆ.
ಖಾರಿಫ್ ಹಂಗಾಮಿಗೆ 24 ಸಾವಿರ ಕೋಟಿ ರೂ.ಗಳ ರಸಗೊಬ್ಬರ ಸಬ್ಸಿಡಿಗೆ ಅನುಮೋದನೆ ಸಿಕ್ಕಿದೆ. ಇದಲ್ಲದೇ ಅಸ್ಸಾಂನಲ್ಲಿ ಟಾಟಾ ಕಂಪನಿಯ ಪ್ಯಾಕೇಜಿಂಗ್ ಪ್ಲಾಂಟ್‌ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಮೂಲಗಳ ಪ್ರಕಾರ, ಧೋಲೆರಾದಲ್ಲಿ ಟಾಟಾ ಗ್ರೂಪ್‌ನ ಸೆಮಿಕಂಡಕ್ಟರ್ ಸ್ಥಾವರಕ್ಕೆ ಅನುಮೋದನೆ ನೀಡಲಾಗಿದೆ. ಸಿಜಿ ಪವರ್ ನ ಒಸ್ಯಾಟ್ ಸ್ಥಾವರಕ್ಕೂ ಕ್ಯಾಬಿನೆಟ್ ಅನುಮೋದನೆ ನೀಡಿದೆ. (Business News In Kannada)
ಸಂಪುಟದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಎನ್‌ಬಿಎಸ್ ಯೋಜನೆಯಡಿ 3 ಹೊಸ ರಸಗೊಬ್ಬರ ಶ್ರೇಣಿಗಳನ್ನು ಶಾಮೀಲುಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ 2024 ರ ಖಾರಿಫ್ ಋತುವಿಗೆ (01.04.2024 ರಿಂದ 30.09.2024 ರವರೆಗೆ) ಫಾಸ್ಫೇಟಿಕ್ ಮತ್ತು ಪೊಟ್ಯಾಶ್ (ಪಿ ಮತ್ತು ಕೆ) ರಸಗೊಬ್ಬರಗಳ ಮೇಲೆ 24,420 ಕೋಟಿ ರೂ.ಗಳ ಪೋಷಕಾಂಶ ಆಧಾರಿತ ಸಬ್ಸಿಡಿಯನ್ನು ಅನುಮೋದಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಿಶ್ವಾದ್ಯಂತ ಯುರಿಯಾ ರಸಗೊಬ್ಬರದ ಬೆಲೆ ಹೆಚ್ಚಾಗಿದೆ, ಆದರೆ ಮೋದಿ ಸರ್ಕಾರ ಅವುಗಳ ಬೆಲೆ ಏರಿಕೆಗೆ ಅವಕಾಶ ನೀಡಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.