Home / ರಾಜಕೀಯ / ಬೆಳಗಾವಿ: ಖ್ಯಾತ ವೈದ್ಯ ಡಾ.ಕೊಡಕಣಿ ನಿಧನ

ಬೆಳಗಾವಿ: ಖ್ಯಾತ ವೈದ್ಯ ಡಾ.ಕೊಡಕಣಿ ನಿಧನ

Spread the love

ಬೆಳಗಾವಿ: ಇಲ್ಲಿನ ಖ್ಯಾತ ಪ್ರಸ್ತೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾಗಿದ್ದ ಡಾ.ಬಿ.ಎಸ್. ಕೊಡಕಣಿ (89) ಅವರು ಗುರುವಾರ ನಿಧನರಾದರು.

1959ರಲ್ಲಿ ಬರೋಡಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಅವರು 1962ರಲ್ಲಿ ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಡಿ. ಪದವೀಧರರಾಗಿ, ಮುಂಬೈ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳ ರಿಜಿಸ್ಟ್ರಾರ್‌ ಆಗಿ ಸೇವೆಸಲ್ಲಿಸಿದ್ದರು.

1966ರಲ್ಲಿ ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. ಇಂಗ್ಲೆಂಡ್, ಯೂರೋಪ, ಕೆನಡಾ, ಅಮೆರಿಕಾಗಳಲ್ಲಿ ಉಪನ್ಯಾಸಕರಾಗಿ, ಸಂಶೋಧಕರಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ.

2010ರಿಂದ 2020ರವರೆಗೆ ಕೆಎಲ್‍ಇ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾಗಿ, ತಾಯಿ ಮತ್ತು ನವಜಾತ ಶಿಶುಗಳ ಸಂಶೋಧನಾ ವಿಭಾಗದ ಮಾರ್ಗದರ್ಶಕರಾಗಿದ್ದರು. 1989-90ರಲ್ಲಿ ದೇಶದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂ.ಸಿ.ಎಚ್ (ಗರ್ಭಿಣಿ ಮತ್ತು ನವಜಾತ ಶಿಶು ಆರೋಗ್ಯ ಪಾಲನ ಕೇಂದ್ರ) ಸ್ಥಾಪನೆ ಮಾಡಿದ ತಂಡದಲ್ಲಿ ಡಾ.ಕೊಡಕಣಿ ಪ್ರಮುಖ ಪಾತ್ರ ವಹಿಸಿದ್ದರು.

ಡಾ.ಕೋಡಕಣಿ ಅವರು ಮೊದಲ ಬಾರಿಗೆ ಬೆಳಗಾವಿಯಲ್ಲಿ 1982-83ರಲ್ಲಿ ಅಲ್ಟ್ರಾಸೌಂಡ ಮೆಷಿನ್ ಸೌಲಭ್ಯ ತಂದರು. 1990ರಲ್ಲಿ ಲ್ಯಾಪ್ರೋಸ್ಕೊಪಿ ಸರ್ಜರಿ ಆರಂಭಿಸಿದರು. ರಾಜ್ಯ ಸರ್ಕಾರ ಇವರ ಸೇವೆ ಗಮನಿಸಿ ‘ರಾಜ್ಯ ಕುಟುಂಬ ಯೋಜನಾ ಪ್ರಶಸ್ತಿ’ಯನ್ನು ಎರಡು ಬಾರಿ ನೀಡಿದೆ. ಶ್ರೇಷ್ಠ ವಾಗ್ಮಿ ಆಗಿದ್ದ ಅವರು, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಶಿಷ್ಯ ಬಳಗ ಹೊಂದಿದ್ದಾರೆ. 10 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದು ಅವರ ಹಿರಿಮೆ.

ದೇಶ ಅತ್ಯುನ್ನತ ಗೌರವವಾದ ಬಿ.ಸಿ.ರಾಯ್‌ ಪ್ರಶಸ್ತಿ, ಬ್ರಿಟಿಷ್ ಕೌನ್ಸಿಲ್‌ ಅವಾರ್ಡ್‌ ಕೂಡ ಅವರಿಗೆ ಸಂದಿವೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ