Home / ರಾಜಕೀಯ / ಜಯದೇವಕ್ಕೆ ಇನ್ನೂ ಇಲ್ಲ ಪೂರ್ಣಾವಧಿ ನಿರ್ದೇಶಕ

ಜಯದೇವಕ್ಕೆ ಇನ್ನೂ ಇಲ್ಲ ಪೂರ್ಣಾವಧಿ ನಿರ್ದೇಶಕ

Spread the love

ಬೆಂಗಳೂರು: ಡಾ| ಸಿ.ಎನ್‌.ಮಂಜುನಾಥ್‌ ನಿವೃತ್ತಿಯಿಂದ ತೆರವಾಗಿರುವ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು, ಹುದ್ದೆ ಗಿಟ್ಟಿಸಲು ಭಾರೀ ಪೈಪೋಟಿ ಶುರುವಾಗಿದೆ. ಆದರೆ ಈ ನಡುವೆಯೇ, ಇಷ್ಟೊಂದು ದೊಡ್ಡ ಸಂಸ್ಥೆಗೆ ನಿರ್ದೇಶಕರಾಗಲು ಸಂಸ್ಥೆಯಲ್ಲಿಯೇ ಹಲವು ಮಂದಿ ಹಿರಿಯರು, ಅನುಭವಿಗಳು, ಸೇವಾ ಹಿರಿತನವುಳ್ಳವರಿದ್ದರೂ ನಿವೃತ್ತರೊಬ್ಬರನ್ನು ಹಂಗಾಮಿಯಾಗಿ ನೇಮಿಸಿರುವುದು ಸಂಸ್ಥೆಯಲ್ಲಿ ಅನೇಕರ ಹುಬ್ಬೇರಿಸಿದೆ.

 

ಬೆಂಗಳೂರು, ಮೈಸೂರು, ಕಲಬುರಗಿ ಸೇರಿ 3 ಸಾವಿರ ಹಾಸಿಗೆ ಸಾಮರ್ಥ್ಯದ ಹೃದ್ರೋಗ ಚಿಕಿತ್ಸಾಲ ಯ ಆಗಲಿದೆ. ಹೃದ್ರೋಗಿಗಳ ಚಿಕಿತ್ಸೆಗೆಂದೇ ಪ್ರತ್ಯೇಕವಾಗಿ ಇಷ್ಟು ದೊಡ್ಡ ವ್ಯವಸ್ಥೆ ಹೊಂದಿರುವ ಬೆಂಗಳೂರು ಆಸ್ಪತ್ರೆ ಒಂದರÇÉೇ ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆಗಳು ಸಿಗುತ್ತಿವೆ. ಪ್ರಮುಖವಾಗಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಸೇರಿ 35 ಸಾವಿರ ವೈದ್ಯಕೀಯ ಸೇವೆಗಳು ಲಭ್ಯವಿವೆ. ಸಾವಿರಾರು ಸಿಬ್ಬಂದಿ ಹಾಗೂ ನಿತ್ಯ ಹೊರರೋಗಿ ವಿಭಾಗವೊಂದರಲ್ಲೇ 1500ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಇಂತಹ ಸಂಸ್ಥೆಗೆ ಪೂರ್ಣಾವಧಿಯ ನಿರ್ದೇಶಕರನ್ನು ನೇಮಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

Bengaluru: ಜಯದೇವಕ್ಕೆ ಇನ್ನೂ ಇಲ್ಲ ಪೂರ್ಣಾವಧಿ ನಿರ್ದೇಶಕ

ಡಾ.ಮಂಜುನಾಥ್‌ ನಿವೃತ್ತಿಯಿಂದ ತೆರವಾಗಿರುವ ಹುದ್ದೆಗೆ ನಿವೃತ್ತ ಕುಲಪತಿ ಡಾ.ಕೆ.ಎಸ್‌. ರವೀಂದ್ರನಾಥ್‌ ಅವರನ್ನು ಪ್ರಭಾರಿಯಾಗಿ ನೇಮಿಸಲಾಗಿದೆ. ಮಂಜು ನಾಥ್‌ ಅವರನ್ನು ನಿವೃತ್ತಿ ನಂತರವೂ ಎರಡು ಬಾರಿ ನಿರ್ದೇಶಕ ಹುದ್ದೆಯ ಸೇವಾವಧಿಯನ್ನು ಸರ್ಕಾರ ವಿಸ್ತರಿಸಿತ್ತು. ಹುದ್ದೆ ಖಾಲಿಯಾಗುವ ನಿರೀಕ್ಷೆಯಲ್ಲಿ 20 ಮಂದಿ ನಿರ್ದೇಶಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ