Breaking News

ಮದುವೆ ಮುರಿದ ಪ್ರಿಯಕರ; ಧರಣಿ ಕುಳಿತ ಯುವತಿ

Spread the love

(ಬೆಳಗಾವಿ ಜಿಲ್ಲೆ): ಪ್ರೀತಿಸುತ್ತಿದ್ದ ಯುವತಿಯನ್ನು ಪತಿ ಮನೆಯಿಂದ ಮರಳಿ ಕರೆದುಕೊಂಡು ಬಂದ ಯುವಕ; ತಾನೂ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಪ್ರೀತಿಸಿದ ಯುವಕನ ಮನೆ ಮುಂದೆ ಏಕಾಂಗಿ ಆಗಿ ಧರಣಿ ನಡೆಸಿದ ಪ್ರಕರಣ ಪಟ್ಟಣದಲ್ಲಿ ಗುರುವಾರ ನಡೆದಿದೆ.

 

ಇದರಿಂದ ಎರಡೂ ಕುಟುಂಬದವರ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ಯುವಕನ ಮನೆಯವರು ಬಾಗಿಲನ್ನು ಹಾಕಿಕೊಂಡರೆ, ಯುವಕ ಮಾತ್ರ ಎಲ್ಲೋ ಹೋಗಿದ್ದಾನೆ ಎಂದು ಕುಟುಂಬದವರು ತಿಳಿಸಿದರು.

ಚನ್ನಮ್ಮನ ಕಿತ್ತೂರು: ಮದುವೆ ಮುರಿದ ಪ್ರಿಯಕರ; ಧರಣಿ ಕುಳಿತ ಯುವತಿ

ಇಲ್ಲಿಯ ಸೋಮವಾರ ಪೇಟೆಯ ಯುವಕ- ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವಂತೆ ಯುವತಿ ಮನೆಯವರು ಒಪ್ಪಿಗೆ ನೀಡಿದ್ದರು. ಆದರೆ, ಯುವಕನ ಮನೆಯವರು ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ, ಯುವತಿಯನ್ನು ಬೇರೊಬ್ಬ ವರನೊಂದಿಗೆ ಫೆ.14ರಂದು ಸಂಭ್ರಮದಿಂದ ಮದುವೆ ಮಾಡಿಕೊಟ್ಟಿದ್ದರು.

‘ಯುವಕ ನಿರಾಕರಿಸಿದ ಕಾರಣ ನಾನು ಬೇರೊಬ್ಬರನ್ನು ಮದುವೆಯಾದ. ಸಹಿಸದ ಆತ ನಮ್ಮಿಬ್ಬರ ಖಾಸಗಿತನದ ಫೋಟೊಗಳನ್ನು ಗಂಡನ ಮನೆಯವರಿಗೆ ತೋರಿಸಿದ. ಮದುವೆಯಾದ ಬಳಿಕವೂ ಅಲ್ಲಿಂದ ನಾನು ಮರಳಿ ಬರುವಂತೆ ಮಾಡಿದ. ಈಗ ಅವನೂ ಮದುವೆಯಾಗುತ್ತಿಲ್ಲ. ನನಗೆ ನ್ಯಾಯ ಕೊಡಿಸಬೇಕು’ ಎಂದು ಯುವತಿ ಆಗ್ರಹಿಸಿದರು.

‘ನನ್ನ ಖಾಸಗಿತನದ ಫೋಟೊಗಳನ್ನು ತೋರಿಸಿ ಮದುವೆ ಮುರಿಯಲಾಗಿದೆ ಎಂದು ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ನನ್ನನ್ನು ಹಾಗೂ ನನ್ನ ತಂದೆಯನ್ನು ಎಸ್‌ಐ ಪ್ರವೀಣ ಗಂಗೋಳ ನಿಂದಿಸಿದರು’ ಎಂದು ಯುವತಿ ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಐ ಪ್ರವೀಣ ಗಂಗೋಳ, ‘ಯುವತಿ ದೂರು ನೀಡಿದರೆ ತಕ್ಷಣ ಎಫ್‌ಐಆರ್ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ