Breaking News

ತಪ್ಪಿಲ್ಲದೆ ಸಂವಿಧಾನ ಪೀಠಿಕೆ ಬೋಧಿಸಿದ 4 ವರ್ಷದ ಬಾಲಕ, ಎಲ್ಲೆಡೆ ಭಾರೀ ಮೆಚ್ಚುಗೆ

Spread the love

ಕೊಪ್ಪಳ, ಫೆ.22: ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುತ್ತಿದೆ. ಸದ್ಯ ನಾಲ್ಕು ವರ್ಷದ ಭದ್ರೇಶ್ ಎಂಬ ಅಂಗನವಾಡಿ ಬಾಲಕ ಸಂವಿಧಾನದ ಪೀಠಿಕೆಯನ್ನು ಬೋಧಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಭದ್ರೇಶ್, ನಿನ್ನೆ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಎರಡೂವರೆ ನಿಮಿಷಗಳ ಕಾಲ ಸಂವಿಧಾನ ಪೀಠಿಕೆ ಬೋಧಿಸಿದ್ದಾನೆ. ಬಾಲಕ ತಪ್ಪುಗಳಿಲ್ಲದೆ ಸಂವಿಧಾನ ಪೀಠಿಕೆ ಬೋಧನೆ ಕಂಡ ಜನ ಬೆರಗಾಗಿದ್ದಾರೆ.

ತಪ್ಪಿಲ್ಲದೆ ಸಂವಿಧಾನ ಪೀಠಿಕೆ ಬೋಧಿಸಿದ 4 ವರ್ಷದ ಬಾಲಕ, ಎಲ್ಲೆಡೆ ಭಾರೀ ಮೆಚ್ಚುಗೆ

ಬಾಲಕನ ಟಾಲೆಂಟ್​ಗೆ ಮನಸೋತಿದ್ದಾರೆ. ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಕ ಸಂವಿಧಾನ ಪೀಠಿಕೆಯನ್ನು ನೆನಪಿಟ್ಟುಕೊಂಡು, ತಪ್ಪುಗಳಿಲ್ಲದೇ ಬೋಧಿಸಿದ್ದಾನೆ. ನಾಲ್ಕು ವರ್ಷದ ಬಾಲಕ ಭದ್ರೇಶ್ ನ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

“ರಕ್ತಪಾತವಿಲ್ಲದೇ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತರುವಂತಹ ವ್ಯವಸ್ಥೆಯೇ ಪ್ರಜಾಪ್ರಭುತ್ವ’ ಎನ್ನುವ ಮೂಲ ಮಂತ್ರದೊಂದಿಗೆ ನಮ್ಮ ಸಂವಿಧಾನವನ್ನು ರಚಿಸಲಾಗಿದೆ.

 


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ