Breaking News
Home / ರಾಜಕೀಯ / ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಿಂದ ಬ್ಲಾಕ್‌ಮೇಲ್ : ಕಾಂಗ್ರೆಸ್ ದೂರು

ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಿಂದ ಬ್ಲಾಕ್‌ಮೇಲ್ : ಕಾಂಗ್ರೆಸ್ ದೂರು

Spread the love

ಬೆಂಗಳೂರು: ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ತನಗೆ ಅಡ್ಡಮತ ಚಲಾಯಿಸುವಂತೆ ಬಿಜೆಪಿ (BJP) ಹಾಗೂ ಜಾತ್ಯಾತೀತ ಜನತಾದಳ (JDS) ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ನಾಯಕರು ದೂರು ದಾಖಲು ಮಾಡಿದ್ದಾರೆ.

RAJYASABHA ELECTION: ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಿಂದ ಬ್ಲಾಕ್‌ಮೇಲ್ : ಕಾಂಗ್ರೆಸ್ ದೂರು

ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravikumar), ಪೊನ್ನಣ್ಣ (Ponnanna) ಹಾಗೂ ಕೋನರೆಡ್ಡಿ (Konareddy) ನೇತೃತ್ವದ ನಿಯೋಗದಿಂದ ಬೆಂಗಳೂರು (Benagaluru) ಪೊಲೀಸ್ ಆಯುಕ್ತ ಬಿ. ದಯಾನಂದ್ (B. Dayanand) ಅವರಿಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ, “ಕಾಂಗ್ರೇಸ್ ನ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಿರುವ ಶಾಸಕರುಗಳಾದ ಲತಾ, ಪುಟ್ಟಸ್ವಾಮಿ ಗೌಡರಿಗೆ ಹಾಗೂ ಕೆಲವು ಕಾಂಗ್ರೇಸ್ ಶಾಸಕರಿಗೆ ಬ್ಲಾಕ್ ಮೇಲ್ ಮತ್ತು ಒತ್ತಡ ಹೇರಿ, ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ತನಗೆ ಅಡ್ಡಮತ ಚಲಾಯಿಸುವಂತೆ ಬಿಜೆಪಿ ಹಾಗೂ ಜಾತ್ಯಾತೀತ ಜನತಾದಳ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ.”

ಫೆಬ್ರವರಿ 22, 2024ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಾಮಪತ್ರವನ್ನು ಸಲ್ಲಿಸಿದ್ದು, ಅವರಲ್ಲಿ ಗೆಲವು ಸಾಧಿಸಲು ನಿರ್ದಿಷ್ಟ ಮತ ಸಂಖ್ಯೆ ಇಲ್ಲ. ಇದನ್ನು ತಿಳಿದೂ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೇಸ್ ಪಕ್ಷದ ಶಾಸಕರನ್ನು ಹಾಗೂ ಸಹ ಸದಸ್ಯರಾದ ಶಾಸಕರನ್ನು ಒತ್ತಡ ಹಾಗೂ ಹಣದ ಆಮಿಷವನ್ನು ಒಡ್ಡಿ ಪಕ್ಷಾಂತರವನ್ನು ನಡೆಸಿ ಮತ ಚಲಾಯಿಸುವಂತೆ ಒತ್ತಡ ಹಾಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಳಾಗಿದೆ.


Spread the love

About Laxminews 24x7

Check Also

ಎಣ್ಣೆಯಲ್ಲೂ ಬಡವರಿಗೆ ಬರೆ, ಶ್ರೀಮಂತರ ಮದ್ಯದ ದರ ಇಳಿಕೆ, ಬಡವರ ಮದ್ಯ ದುಬಾರಿ!

Spread the love ಬೆಂಗಳೂರು: ಕರ್ನಾಟಕದಲ್ಲಿ ಒಂದೇ ಬಾರಿ ಮದ್ಯದ ದರ ಏರಿಕೆ ಮತ್ತು ಇಳಿಕೆ ಎರಡೂ ಆಗುತ್ತಿದೆ! ಹೌದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ