Breaking News

ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟ ಅಧಿಕಾರಿ ಕೊನೆಗೂ ಅಮಾನತು,

Spread the love

ಶಿವಮೊಗ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಬಡ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಸೌಲಭ್ಯಗಳನ್ನು ಉಪನಿರ್ದೇಶಕ ಗೋಪಿನಾಥ್ ಇಬ್ಬರು ಮಹಿಳೆಯರೊಂದಿಗೆ ಸೇರಿಕೊಂಡು ಭಾರೀ ಭ್ರಷ್ಟಾಚಾರವೆಸಗಿದ್ದಾನೆ. ಸದ್ಯಕ್ಕೆ ಒಂದೆರಡು ಪ್ರಕರಣಗಳಲ್ಲಿ ಮಾತ್ರವೇ ಲಕ್ಷಾಂತರ ರೂಪಾಯಿ ಅವ್ಯವಹಾರ ಬಯಲು ಆಗಿದೆ.
ಇನ್ನೂ ಸಮಗ್ರ ತನಿಖೆ ಆದ್ರೆ ಗೋಪಿನಾಥನ ಕರ್ಮಕಾಂಡ ಮತ್ತಷ್ಟು ಬಯಲಿಗೆ ಬೀಳುವುದು ಗ್ಯಾರಂಟಿ.ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಕಳೆದ ಕೆಲವು ವರ್ಷಗಳಿಂದ ಮಾಡಿರುವ ಗೋಲ್ ಮಾಲ್ ಕೊನೆಗೂ ಬಯಲಾಗಿದೆ. ಬಿಸಿಎಂ ಹಾಸ್ಟೆಲ್ ಗಳ ವಿದ್ಯಾರ್ಥಿಗಳಿಗೆ ಸೌಲಭ್ಯಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಗುಳಂ ಮಾಡಿದ್ದಾನೆ ಈತ. ಕೊನೆಗೂ ಈತನ ಕಳ್ಳಾಟವು ಹೊರಬಿದ್ದಿದೆ. ತನ್ನ ಪ್ರಭಾವದಿಂದ ಇಷ್ಟು ದಿನ ಇಲಾಖೆಯಲ್ಲೇ ಉಳಿದುಕೊಂಡಿದ್ದ ಭ್ರಷ್ಟ ಅಧಿಕಾರಿಯ ಕರ್ಮಕಾಂಡದ ಕುರಿತು ಒಂದು ವರದಿ ಇಲ್ಲಿದೆ.

Golmaal officer suspended: ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟ ಅಧಿಕಾರಿ ಕೊನೆಗೂ ಅಮಾನತು, ಇನ್ನಷ್ಟು ತನಿಖೆ ಆದ್ರೆ ಮತ್ತಷ್ಟು ಗೋಲ್ ಮಾಲ್ ಬಯಲಾಗುತ್ತೆ

ಈ ಸುದ್ದಿಯ ಕೇಂದ್ರಬಿಂದು ಗೋಪಿನಾಥ್ – ಈತ ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈತ ಕೆಲಸ ಮಾಡುತ್ತಿದ್ದಾನೆ. ಈ ಎರಡು ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್ ಗಳಲ್ಲಿ ವಿವಿಧ ಅಗತ್ಯ ವಸ್ತುಗಳ ಖರೀದಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ್ದಾನೆ.

1) ಭದ್ರಾವತಿ ತಾಲೂಕಿನಲ್ಲಿ 2021 ಮತ್ತು 2022 ರಲ್ಲಿ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲಭೂತ ಸಾಮಗ್ರಿಗಳ ಖರೀದಿಯಲ್ಲಿ ಗೋಲ್ ಮಾಲ್ ನಡೆದಿರುವ ತನಿಖೆಯಿಂದ ಬಯಲು ಆಗಿದೆ.

ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ_ವಿದ್ಯಾರ್ಥಿನಿಲಯಗಳಿಗೆ ಅಗತ್ಯವಿರುವ ಮೂಲಭೂತ ಸಾಮಾಗ್ರಿಗಳಾದ ವುಡನ್ ಆಫೀಸ್ ಟೇಬಲ್, ವುಡನ್ ರಿವಾಲ್ವಿಂಗ್ ಛೇರ್, ಬಟ್ಟೆ ಒಣಗಿಸುವ ಸ್ಟ್ಯಾಂಡ್, ಶೌಚಾಲಯಗಳಿಗೆ ಬಾಗಿಲು ಲೈಬ್ರರಿ ಬೀರುಗಳು, ಸ್ಟೀಲ್ ಲೋಟ, ಇಡ್ಲಿ ಪಾತ್ರೆ, ಪ್ಲಾಸ್ಟಿಕ್ ಛೇರ್‌ಗಳು, ಟ್ರಂಕುಗಳು, ಸ್ಟೀಲ್ ತಟ್ಟೆಗಳು, ಜಾಮೂನು ಬಟ್ಟಲು, ಸೊಳ್ಳೆ ಪರದೆ, ತರಕಾರಿ ಸ್ಟ್ಯಾಂಡ್ ಖರೀದಿಸಿದ್ದಾರೆ. ಎಲ್ಲವೂ ಫೇಕ್ ಟೆಂಡರ್ ಮತ್ತು ಗೋಲ್ ಮಾಲ್ ಮಾಡಿ ಸುಮಾರು 24.62 ಲಕ್ಷ ರೂಪಾಯಿ ಅವ್ಯವಹಾರ ಮಾಡಿದ್ದು ಲೆಕ್ಕ ಪರಿಶೋಧನೆ ಸಮಯದಲ್ಲಿ ಕಂಡು ಬಂದಿದೆ.

2) ಇನ್ನು ಶಿವಮೊಗ್ಗ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಆಗಿ 2022 ರಿಂದ 2023 ವರೆಗೆ ಗೋಪಿನಾಥ್ ಸೇವೆ ಸಲ್ಲಿಸಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಕೂಡಾ ಗೋಪಿನಾಥ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಹಾಸ್ಟೆಲ್ ಸಿಬ್ಬಂದಿಯ ಹೆಸರಿನಲ್ಲಿ ಏಜೆನ್ಸಿಗಳ ಮೂಲಕ 21.17 ಲಕ್ಷ ರೂಪಾಯಿ ವಿವಿಧ ಬಿಸಿಎಂ ಹಾಸ್ಟೇಲ್ ಗಳ ಖರೀದಿಯಲ್ಲಿ ಗೋಲ್ ಮಾಲ್ ಮಾಡಿದ್ದಾನೆ. ಈ ಗೋಲ್ ಮಾಲ್ ಮಾಡಿರುವುದು ಲೆಕ್ಕ ಪರಿಶೋಧನೆ ಸಮಯದಲ್ಲಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಹೀಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲವು ವರ್ಷಗಳಿಂದ ಗೋಪಿನಾಥ್ ಬಡ ದಲಿತ ಹಿಂದುಳಿದ ವರ್ಗಗಳಿಗೆ ಸರಕಾರದ ನೀಡಿದ ಅನುದಾನ ಮನಸ್ಸಿಗೆ ಬಂದಂತೆ ದುರ್ಬಳಕೆ ಮಾಡಿಕೊಂಡಿದ್ದಾನೆ. ನಕಲಿ ಬಿಲ್, ನಕಲಿ ಏಜೆನ್ಸಿಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾನೆ. ಸದ್ಯ ಈ ಎರಡು ತಾಲೂಕಿನ ಖರೀದಿಯಲ್ಲಿ 45.79 ಲಕ್ಷ ರೂಪಾಯಿ ಅವ್ಯವಹಾರ ಮಾಡಿರುವುದು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈತನ ವಿರುದ್ದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಅನೇಕ ದೂರುಗಳನ್ನು ನೀಡಿದ್ದರು. ಆದ್ರೂ ತನ್ನ ಪ್ರಭಾವದಿಂದ ಈತ ಇಲಾಖೆಯಲ್ಲಿ ತಾನು ಆಡಿದ್ದೇ ಆಟ ಎನ್ನುವಂತೆ ಇದ್ದ. ಕೊನೆಗೂ ಈತನ ಕರ್ಮಕಾಂಡವು ಈಗ ಬಯಲಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗೋಪಿನಾಥನನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ರಾಕೇಶ್ ಕುಮಾರ್ ಅವರು ಅಮಾನತು ಮಾಡಿದ್ದಾರೆ.


Spread the love

About Laxminews 24x7

Check Also

ಮಹಾನ್ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಮಹದಾಸೆಯಿಂದ ಸರ್ಕಾರಉರುಳಿಸಲು ಸಾವಿರ ಕೋಟಿ ತೆಗೆದಿಟ್ಟಿದ್ದಾರೆ: ಯತ್ನಾಳ

Spread the love ದಾವಣಗೆರೆ: ಮಹಾನ್ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಮಹದಾಸೆಯಿಂದ ರಾಜ್ಯ ಸರ್ಕಾರವನ್ನು ಉರುಳಿಸಲು ಸಾವಿರ ಕೋಟಿ ತೆಗೆದಿಟ್ಟಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ