Breaking News

ಕೈಮುಗಿದು ಒಳಗೆ ಬಾ ವಾಕ್ಯ ಬದಲಾವಣೆ: ಮಣಿವಣ್ಣನ್ ಗಪ್​ಚುಪ್, ಅಶೋಕ್​ ಕೆಂಡಾಮಂಡಲ

Spread the love

ಬೆಂಗಳೂರು, (ಫೆಬ್ರವರಿ 19): ಕರ್ನಾಟಕದ ಎಲ್ಲ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದ ‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ ಘೋಷ ವಾಕ್ಯವನ್ನು ಬದಲಾಯಿಸಿರುವ ಸಮಾಜ ಕಲ್ಯಾಣ ಇಲಾಖೆ (Department of Social Welfare) ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ತಪ್ಪನ್ನು ಸರಿಪಡಿಸಿಕೊಂಡಿದೆ. ಇನ್ನು ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ (manivannan) ಅವರನ್ನು ಮಾಧ್ಯಮಗಳು ಸ್ಪಷ್ಟನೆ ಕೇಳಿದ್ದಕ್ಕೆ ಗರಂ ಆಗಿದ್ದಾರೆ. ಅಲ್ಲದೇ ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮತ್ತೊಂದೆಡೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್(R Ashok)​, ಮಣಿವಣ್ಣನ್​ ವಿರುದ್ಧ ಕೆಂಡಾಮಂಡಲರಾಗಿದ್ದು, ಇಲಾಖೆಯಿಂದ ಅವರನ್ನು ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಕೈಮುಗಿದು ಒಳಗೆ ಬಾ ವಾಕ್ಯ ಬದಲಾವಣೆ: ಮಣಿವಣ್ಣನ್ ಗಪ್​ಚುಪ್, ಅಶೋಕ್​ ಕೆಂಡಾಮಂಡಲ

ಘೋಷ ವಾಕ್ಯದ ಆದೇಶದ ಬ್ಗಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದ್ದಕ್ಕೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಗರಂ ಆಗಿದದ್ದು. ಘೋಷವಾಕ್ಯ ಬದಲಾವಣೆ ಬಗ್ಗೆ 2 ಸದನಗಳಲ್ಲಿ ಪ್ರಸ್ತಾಪವಾಗಿದೆ. ಸದನದಲ್ಲೇ ಉತ್ತರ ಸಿಗುತ್ತೆ, ನಾವು ಹೇಳಿದ್ರೆ ಸರಿಯಾಗಲ್ಲ. ನಾನು ಸರ್ಕಾರಿ ಅಧಿಕಾರಿಯಾಗಿ ಈಗ ಉತ್ತರ ಕೊಡಲು ಆಗಲ್ಲ. ಅಸೆಂಬ್ಲಿಯಲ್ಲಿ ಚರ್ಚೆ ಆಗದೆ ನಾನು ಹೇಗೆ ಉತ್ತರಿಸಲಿ ಸಿಡಿಮಿಡಿಗೊಂಡರು.


Spread the love

About Laxminews 24x7

Check Also

ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Spread the love ಬೀದರ್ : ಡ್ಯೂಟಿಗೆ ತಡವಾಗಿ ಬಂದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್‌ಐ ಮೇಲೆ ಪೊಲಿಸ್ ಪೇದೆಯೊಬ್ಬ ಹಲ್ಲೆ ಮಾಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ