Breaking News

ಮೋದಿ ಪರ ಬ್ಯಾಟಿಂಗ್ ಮಾಡಿದ ಕುಮಾರಸ್ವಾಮಿ

Spread the love

ಬೆಂಗಳೂರು: GST ಪರಿಹಾರ ಮತ್ತು ರಾಜ್ಯಕ್ಕೆ ಬರಬೇಕಾದ ಹಣಕಾಸಿಗಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಕೇಳುತ್ತಿರುವ ವಿಧಾನದ ಕುರಿತು ಮಾಜಿ‌ ಸಿಎಂ ಹೆಚ್.ಡಿ. ಕುಮಾರಸ್ವಾಮಿ‌ ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಜಿಎಸ್ ಟಿಯ 58% ಮರಳಿ ರಾಜ್ಯಕ್ಕೆ ಬರುತ್ತಿದೆ ಎಂದು‌ ವಿವರಿಸಿದರು.

 

ದೇಶದ ಇತಿಹಾಸದಲ್ಲಿಯೇ ಕೇಂದ್ರದಿಂದ ಬರಪರಿಹಾರ‌ ನೀಡಿದ‌ ಉದಾಹರಣೆಯೇ ಇಲ್ಲ. ತುರ್ತು ನಿಧಿಯಿಂದ ರಾಜ್ಯಗಳು ಇದನ್ನು ನಿಭಾಯಿಸಿಕೊಂಡು ಬಂದಿವೆ ಎಂದು ಹೇಳುವ ಮೂಲಕ ಕೇಂದ್ರದ‌ ನೀತಿ‌ಯನ್ನು ಕುಮಾರಸ್ವಾಮಿ ಸಮರ್ಥಿಸಿಕೊಂಡರು.

1958ರಿಂದ ಆರ್ಥಿಕ‌ ಸಮಿತಿ ಆರಂಭವಾಗಿದ್ದು, ವೈಜ್ಞಾನಿಕವಾಗಿ ಹಣ ಹಂಚಿಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಅನ್ಯಾಯ ಆಗಿದ್ದರೆ ನಿಮ್ಮ ಜೊತೆ ನಾವು ಧ್ವನಿಗೂಡಿಸಲು ಸಿದ್ಧ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಕ್ಕೆ ಹಣದ ಕೊರತೆ ಇದ್ದರೆ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ. ಅವರ ಜೊತೆ ಮಾತನಾಡಿ ಅನ್ಯಾಯ ಸರಿ ಮಾಡೋಣ. ಅದು ಬಿಟ್ಟು ಬಹಿರಂಗವಾಗಿ ಅವರನ್ನೇ ಬೈದರೆ ಹೇಗೆ? ನೀವು ಸಾರ್ವಜನಿಕವಾಗಿ ಮೋದಿ ಬೈದರೆ ಸಂಬಂಧ ಹಾಳಾಗುತ್ತದೆ ಎಂದು ಸಿಎಂ ಸಿದ್ದುಗೆ ತಿವಿದರು.


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ