ಬೆಂಗಳೂರು: ಹಣ ಕೊಡದಿದ್ರೆ ಮಗಳ ನಗ್ನ ಫೋಟೋಗಳನ್ನು ರಿಲೀಸ್ ಮಾಡೋದಾಗಿ ರೌಡಿಯೊಬ್ಬ ಧಮ್ಕಿ ಹಾಕಿದ್ದಾನೆ. ಜೈಲಲ್ಲಿ ಇದ್ದುಕೊಂಡೇ ಯುವತಿಯ ನಗ್ನ ಫೋಟೋವನ್ನು ಆಕೆಯ ತಾಯಿಗೆ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ.
ಜೈಲಲ್ಲಿರುವ ರೌಡಿ ಮನೋಜ್ ಎಂಬಾತ ತನ್ನ ಸಹವರ್ತಿ ಕೆಂಚನಿಂದ ಯುವತಿಯ ಬೆತ್ತಲೆ ಫೋಟೊ ತರಿಸಿಕೊಂಡು, ಆ ಫೋಟೋವನ್ನು ಯುವತಿಯ ತಾಯಿಗೆ ಕಳುಹಿಸಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ.
ಕಳೆದ ಆಗಸ್ಟ್ ನಲ್ಲಿಯೂ ಇದೇ ರೀತಿ ಯುವತಿಯ ತಾಯಿಗೆ ಫೋಟೊ ಕಳಿಸಿ 40 ಸಾವಿರ ಹಣ ಕಿತ್ತಿದ್ದನಂತೆ ಮನು.
ಇದೀಗ ಮತ್ತೆ ಅದೇ ಚಾಳಿ ಮುಂದುವರೆಸಿರುವ ನೀಚರು, ಫೆಬ್ರವರಿ 9 ಹಾಗೂ 12ರಂದು ಮತ್ತೆ ಯುವತಿಯ ತಾಯಿಗೆ ವಾಟ್ಸಾಪ್ ಹಾಗೂ ಮೆಸೆಂಜರ್ ಮೂಲಕ ಕರೆ ಮಾಡಿ, 5 ಲಕ್ಷ ಹಣ ನೀಡುವಂತೆ ಕೇಳಿದ್ದಾರೆ. ಹಣ ನೀಡದಿದ್ದರೆ ನಿನ್ನ ಮಗಳ ಬೆತ್ತಲೆ ಫೋಟೊ ನಿನ್ನ ಅಳಿಯನಿಗೆ ಕಳಿಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಇನ್ಫಾರ್ಮೇಶನ್ ಟೆಕ್ನಾಲಜಿ ಆಯಕ್ಟ್ 67 , ಐಪಿಸಿ 34 ಮತ್ತು 384 ಅಡಿ ಪ್ರಕರಣ ದಾಖಲು ಮಾಡಲಾಗಿದೆ.