ಚಿತ್ರದುರ್ಗ : ಜನರಿಗೆ ಆಸೇ ತೋರಿಸಿ ಹಣ ಡಬಲ್ ಮಾಡಿಕೊಡ್ತೀನಿ ಎಂದು ಜನರಿಗೆ ಕೋಟಿ ಕೋಟಿ ಹಣ ವಂಚಿಸಿದ ಪ್ರಕರಣ ಚಿತ್ರದುರ್ಗದಲ್ಲಿ ಬೆಳಕಿದೆ ಬಂದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕಿನ ಚಿಕ್ಕಜಾಜೂರಿನಲ್ಲಿ (Chikkajajur) ಕಳೆದ ಡಿಸೆಂಬರ್ 15ರಂದು ಈ ಘಟನೆ ನಡೆದಿದ್ದುತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ಆಂಧ್ರ ಪ್ರದೇಶ (Andhra Pradesh) ಮೂಲದ ಕೋಡೆ ರಮಣಯ್ಯ (Kode Ramanaiah) ಎಂದು ಗುರುತಿಸಲಾಗಿದೆ. ಈತ ಹಣವನ್ನು ಡಬಲ್ ಮಾಡುವುದಾಗಿ ಆನ್ ಲೈನ್ ಮೂಲಕ ಹಣ ಪಡೆದು ಕೋಟಿ ಕೋಟಿ ಹಣ ವಂಚಿಸಿದ್ದಾನೆ.
ಚಿತ್ರದುರ್ಗದ ರೈಲ್ವೆ ಇಲಾಖೆ ನೌಕರ ರಮೇಶಪ್ಪ (Rameshappa) ಎಂಬುವವರಿಂದ 1.4 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ. ಅಲ್ಲದೆ ರಮೇಶಪ್ಪ ಅವರ ಸಂಬಂಧಿಕರಿಂದಲೂ ಹಣ ಪಡೆದಿದ್ದು, ಆರೋಪಿ ರಮಣಯ್ಯ ಒಟ್ಟು 4.79 ಕೋಟಿ ವಂಚಿಸಿದ್ದಾನೆ ಎಂದು ರಮೇಶಪ್ಪ, ಚಿಕ್ಕಜಾಜುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಚಿತ್ರದುರ್ಗ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.