ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳರಿಬ್ಬರನ್ನು (Chain theft) ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ದಂಡು (Bengaluru Dandu) ಎಂದು ಕರೆಯಲ್ಪಡುವ ಈ ಕಳ್ಳರ ಗುಂಪು, ರೈಲಿನಲ್ಲಿ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದರು.
ಬಂಧಿತರನ್ನು ಬಾಲಾಜಿ (Balaji) ಹಾಗೂ ಕಮಲನಾಥನ್ (Kamalnath) ಎಂದು ಗುರುತಿಸಲಾಗಿದೆ. ಜನವರಿ 18 ರಂದು ಬೆಂಗಳೂರು-ಜೋಲಾರ್ಪೇಟೆ (Bengaluru-Jolarpete) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಿತ್ರಾ (Sumitra) ಎಂಬುವವರ ಸರವನ್ನು, ಬಂಗಾರಪೇಟೆಯ (Bangarpete) ಬಿಸಾನತ್ತಂ ಬಳಿ ಸರ ಕಸಿದು ರೈಲಿನಿಂದ ಜಿಗಿದು ಪರಾರಿಯಾಗಿದ್ದರು.
ಸರ ಕಳೆದುಕೊಂಡಿದ್ದ ಸುಮಿತ್ರಾ ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆದಾರದ ಮೇಲೆ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸರು ಸರಗಳ್ಳರನ್ನು ಬಂಧಿಸಿದ್ದಾರೆ.