Breaking News

ಟೆಂಪೊ- ಟ್ರ್ಯಾಕ್ಟರ್‌ ಡಿಕ್ಕಿ: 13 ಪೊಲೀಸರಿಗೆ ಗಾಯ

Spread the love

ಗೋಕಾಕ: ತಾಲ್ಲೂಕಿನ ಹಿರೇನಂದಿ ಕ್ರಾಸ್ ಬಳಿ ರಸ್ತೆ ಮೇಲೆ ನಿಂತಿದ್ದ ಕಬ್ಬು ಹೇರಿದ ಟ್ರ್ಯಾಕ್ಟರ್‌ಗೆ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೊದಲ್ಲಿದ್ದ 13 ಪೊಲೀಸ್‌ ಸಿಬ್ಬಂದಿ ಹಾಗೂ ಚಾಲಕ ಗಾಯಗೊಂಡ ಘಟನೆ ಸೋಮವಾರ ನಸುಕಿನಲ್ಲಿ ನಡೆದಿದೆ.

ತೀವ್ರವಾಗಿ ಗಾಯಗೊಂಡ ದಾವಣೆಗೆರೆ ಜಿಲ್ಲೆಯ ಹೊನ್ನಾಳಿಯ ಕಡಬಕಟ್ಟಿ ಗ್ರಾಮದ ಅಣ್ಣಪ್ಪ, ಕೊಪ್ಪಳ ಜಿಲ್ಲೆ ಕನಕಗಿರಿಯ ಸೋಮನಾಥ ನಿಂಗಪ್ಪ ಕುಂಬಾರ, ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಗಿ ಗ್ರಾಮದ ರಘು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.

 

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕೋಣನತೆಲೆಯ ವರುಣ ಆಂಜನೇಯ (ಚಾಲಕ), ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬರೂರ ಗ್ರಾಮದ ಸೌರವಕುಮಾರ, ಕಡೂರಿನ ಶೀಗೆಅಡಲು ಗ್ರಾಮದ ಎಸ್.ಬಿ.ಮಲ್ಲೇಶಪ್ಪ, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕವಲಗಾ ಗ್ರಾಮದ ಸಿದ್ದಲಿಂಗ ಚಂದ್ರಕಾಂತ ನಿಂಬಾಳ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅಲದಾಳ ಗ್ರಾಮದ ಪ್ರವೀಣಕುಮಾರ, ಬೈಲಹೊಂಗಲ ತಾಲ್ಲೂಕಿನ ಪುಲರಕೊಪ್ಪದ ಆನಂದ ವಾಸಪ್ಪ ಪುಂಡಲೀಕನವರ, ಅಥಣಿ ತಾಲ್ಲೂಕಿನ ಅಡಹಟ್ಟಿ ಗ್ರಾಮದ ಸುನೀಲ ಶೇಖರ ಹಿಪ್ಪರಗಿ, ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಎಂ.ಜೆ.ಪ್ರದೀಪ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮದ್ವೇರು ಗ್ರಾಮದ ಜಿ.ಎಂ.ಅಕ್ಷಯಕುಮಾರ, ರಾಯಚೂರು ಜಿಲ್ಲೆಯ ಶಿರವಾರ ತಾಲ್ಲೂಕಿನ ಬಾಗವಾಡ ಗ್ರಾಮದ ರಮೇಶ ಮುದಕಪ್ಪ, ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಅರಕೇರಿ ಗ್ರಾಮದ ಸಲೀಮಸಾಬ ಡೊಂಗರಿ ಜಮಾದಾರ ಅವರಿಗೆ ಪುಟ್ಟ ಗಾಯಗಳಾಗಿವೆ.

ಟೆಂಪೊ ಚಾಲಕ ವರುಣ ಆಂಜನೇಯ ಹಾಗೂ ಟ್ರ್ಯಾಕ್ಟರ್‌ ಚಾಲಕ ಮಹಾರಾಷ್ಟ್ರ ಮೂಲದ ಸತೀಶ ತಾತ್ಯಾಬಾ ಚೋರಮಾಲೆ ವಿರುದ್ಧ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಎಂಎಲ್ಎ ಕಾರು ಡ್ರೈವರ್ ಅಪಘಾತದಲ್ಲಿ ಸಾವು; ಶಾಸಕ ಮಹೇಶ ಟೆಂಗಿನಕಾಯಿ ಕಣ್ಣೀರು

Spread the love ಎಂಎಲ್ಎ ಕಾರು ಡ್ರೈವರ್ ಅಪಘಾತದಲ್ಲಿ ಸಾವು; ಶಾಸಕ ಮಹೇಶ ಟೆಂಗಿನಕಾಯಿ ಕಣ್ಣೀರು ಹುಬ್ಬಳ್ಳಿ: ಮಗಳು ಹುಟ್ಟುಹಬ್ಬಕ್ಕೆಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ