Breaking News

ಪಂಚಮಸಾಲಿ 2ಎ ಮೀಸಲಾತಿ ಹೋರಾಟ ನಿಲ್ಲಿಸುವಂತೆ ಮಂತ್ರಿಯೊಬ್ಬ 10 ಕೋಟಿ ರೂ. ಆಮಿಶವೊಡ್ಡಿದ್ದ: ಬಸನಗೌಡ ಪಾಟೀಲ್ ಯತ್ನಾಳ್

Spread the love

ಶಿವಮೊಗ್ಗ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ (Panchamasali 2A reservation protest) ಪುನಃ ಶುರುವಾಗಿದೆ. ಸಮುದಾಯದವರು ಶಿವಮೊಗ್ಗದಲ್ಲಿ ಕೂಡಲಸಂಗಮ ಮಠಾಧೀಶ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ (Basava Jaya Mruthyunjaya Swamy) ನೇತೃತ್ವದಲ್ಲಿ ನಗರದ ಶಿವಪ್ದ ನಾಯಕ್ ವೃತ್ತದಿಂದ ಗೋಪಿವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಚೌಕಿಮಠದಲ್ಲಿ ಜಯಮೃತ್ಯುಂಜಯ ಸ್ವಾಮೀಜಿಯವರು ಲಿಂಗ ಪೂಜೆ ನೆರವೇರಿಸಿದ ಬಳಿಕ ಪ್ರತಿಭಟನೆ ಯಲ್ಲಿ ಭಾಗಿಯಾಗಿರುವ ಶಾಸಕ ಬಸನನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಾತಾಡಿ, ಪಂಚಮಸಾಲಿ ಸಮಾಜದ ಹೋರಾಟವನ್ನು ಮೊಟಕುಗೊಳಿಸಲು ಸರ್ಕಾರದ ಮಂತ್ರಿಗಳು ಏನೆಲ್ಲ ಆಮಿಶವೊಡ್ಡುತ್ತಾರೆ, ಹತ್ತಿಪ್ಪತ್ತು ಕೋಟಿ ರೂ. ಮಠಕ್ಕೆ ನೀಡ್ತೀವಿ ಅನ್ನುತ್ತಾರೆ, ಐಷಾರಾಮಿ ಕಾರುಗಳನ್ನು ಕೊಡಿಸುವುದಾಗಿ ಹೇಳುತ್ತಾರೆ, ಅಂಥವರ ಬಗ್ಗೆ ಎಚ್ಚರದಿಂದಿರಬೇಕು ಅಂತ ಹೇಳಿದರು.

ಪ್ರಾಯಶಃ ಇದೇ ಅಂಶವನ್ನು ವೇದಿಕೆ ಮೇಲಿದ್ದ ಮಲ್ಲಿಕರ್ಜುನ ಹೆಸರಿನ ವ್ಯಕ್ತಿ ಹೇಳಿದ್ದರು ಅಂತ ಕಾಣುತ್ತೆ. ಅವರ ಹೇಳಿದ್ದನ್ನು ಉಲ್ಲೇಖಿಸಿದ ಯತ್ನಾಳ್, ಹಿಂದೆ ಇದೇ ಹೋರಾಟ ಹೊಸಪೇಟೆಯಲ್ಲಿ ನಡೆಯುತ್ತಿದ್ದಾಗ ತಮ್ಮದೇ ಸಮುದಾಯದ ಮಂತ್ರಿಯೊಬ್ಬ ಅದನ್ನು ನಿಲ್ಲಿಸಲು ಸ್ವಾಮೀಜಿಗಳಿಗೆ 10 ಕೋಟಿ ರೂ.ಗಳ ಆಮಿಶವೊಡ್ಡಿದ್ದ ಎಂದು ಯತ್ನಾಳ್ ಹೇಳಿದರು. ಆದರೆ ಗುರುಗಳು ಎಷ್ಟೇ ಕೋಟಿ ಕೊಟ್ಟರೂ ಸಮುದಾಯಕ್ಕೆ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನಿಲ್ಲಿಸಲ್ಲ ಅಂದರು ಎಂದು ಯತ್ನಾಳ್ ಹೇಳಿದಾಗ ನೆರೆದಿದ್ದ ಜನ ಜೋರಾಗಿ ಚಪ್ಪಾಳೆ ತಟ್ಟಿದರು.


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ