ಅದರ ಝಲಕ್ ಇಲ್ಲಿದೆ.ಹಲಗೆ ಬಾರಿಸುತ್ತಾ ಜಟ್ಟಿಗಳಿಗೆ ಹುರುಪು ನೀಡುತ್ತಿರುವ ಹಲಗೆ ಮೇಳ ಕಲಾವಿದರು.ಮಣ್ಣಿನ ಅಖಾಡದಲ್ಲಿ ಎದುರಾಳಿಯನ್ನು ಎತ್ತಿ ನೆಲಕ್ಕೆ ಬಡಿಯುವ ಮಲ್ಲರು. ಕೊಬ್ಬಿದ ಗೂಳಿಯಂತೆ, ಮದಗಜಗಳಂತೆ ಜಟ್ಟಿಗಳ ಕಾದಾಟ. ಮಲ್ಲರ ಯುದ್ದ ಕಂಡು ಜನರ ಕೇಕೆ ಚಪ್ಪಾಳೆ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ.
ತುಳಸಿಗೇರಿಯಲ್ಲಿ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ತಮಿಳುನಾಡು ಮೂಲದಿಂದಲೂ ಕುಸ್ತಿ ಆಡುವುದಕ್ಕೆ ಮಲ್ಲರು ಆಗಮಿಸಿದ್ದರು. ಮಣ್ಣಿನ ಅಖಾಡದಲ್ಲಿ ಜಟ್ಟಿಗಳು ತೊಡೆ ತಟ್ಟಿ ಸೆಣಸಾಟ ನಡೆಸುತ್ತಿರುವುದು ನೋಡುಗರನ್ನು ರೋಮಾಂಚನಗೊಳಿಸಿತು.