ಚಿಕ್ಕಮಗಳೂರು: ಲೋಕ ಸಭಾ (loksabha) ಚುನಾವಣೆ (election) ಹತ್ತಿರವಿರುವಾಗಲೇ ಇಲ್ಲೊಬ್ಬರು ಮದುವೆ ಆಮಂತ್ರಣ (wedding invitation) ಪತ್ರಿಕೆಯಲ್ಲಿ ಪ್ರಧಾನಿ (PM) ನರೇಂದ್ರ ಮೋದಿ (narendra modi) ಮೇಲಿನ ಅಭಿಮಾನವನ್ನು ತೋರ್ಪಡಿಸಿದ್ದಾರೆ.
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಆಶೀರ್ವಾದವೇ ಉಡುಗೊರೆ ಅಥವಾ ಆಗಮನವೇ ಉಡುಗೊರೆ ಎಂದು ಬರೆಯುವುದು ಸಾಮಾನ್ಯ.
ಆದರೆ ಇವರು ಮಾತ್ರ ಆಮಂತ್ರಣ ಪತ್ರಿಕೆಯಲ್ಲಿ 2024ರ ಲೋಕಸಭೆ ಚುನಾವಣೆ ಪರ ಪ್ರಚಾರ ಮಾಡಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಶಿ ಅವರು ತಮ್ಮ ತಂಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರ ನಡೆಸಿದ್ದಾರೆ.
ವಧುವರರಿಗೆ ಉಡುಗೊರೆ ಬೇಡ ಮೋದಿಗೆ ಮತ ನೀಡಿ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆದು ತಮ್ಮ ಸ್ನೇಹಿತರು, ಬಂಧುಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಮಕ್ಕಳ ಭವಿಷ್ಯ ಮೋದಿಯಿಂದ ಮಾತ್ರ ಸುಭದ್ರ ವಾಗಿರುತ್ತದೆ ಎಂದು ಪತ್ರಿಕೆಯಲ್ಲಿ ಬರೆಸಿದ್ದಾರೆ.