ಹುಬ್ಬಳ್ಳಿ, ಜ.30: ಟೊಮೇಟೊ, ಈರುಳ್ಳಿ ಬೆಲೆ ಗಗನಕ್ಕೇರಿದಾಗ ಖದೀಮರು ಕತ್ತಲಾಗುವುದಕ್ಕಾಗಿಯೇ ಕಾದು ಬೆಲೆಯನ್ನು ಕದ್ದು ಪರಾರಿಯಾಗುತ್ತಿದ್ದರು. ಹೀಗಾಗಿ ರೈತರು (Farmer) ತಮ್ಮ ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸುತ್ತಿದ್ದರು. ಆದರೆ ಈಗ ಮೆಣಿಸಿನಕಾಯಿ (Chilli) ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿದ್ದು ಬೆಳೆಯನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜಮೀನಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ರೈತ ತಾನು ಬೆಳೆದ ಮೆಣಸಿನಕಾಯಿ ಬೆಳೆಯನ್ನು ಕಳ್ಳರಿಂದ ಕಾಪಾಡಿಕೊಳ್ಳಲು ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾನೆ. ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾದ ಹಿನ್ನಲೆ ಶಿವಪುತ್ರಪ್ಪ ದ್ಯಾಮಣ್ಣವರ ಅವರು ಬೆಳೆಗೆ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣಿಟ್ಟಿದ್ದಾರೆ. ಸೋಲಾರ್ ಮೂಲಕ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.
ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಣಸಿನಕಾಯಿಗೆ 80 ರಿಂದ 90 ಸಾವಿರ ರೂ ಇದೆ. ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡೋರು ಜಾಸ್ತಿಯಾಗಿದ್ದಾರೆ. ಶಿವಪುತ್ರಪ್ಪ ಅವರು ಐದು ಎಕರೆಯಲ್ಲಿ ಮೆಣಸಿನಕಾಯಿ ಬೆಳದಿದ್ದಾರೆ. ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡಬಾರದು ಅನ್ನೋ ಉದ್ದೇಶಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.