Breaking News

ಅಸಹಜವಾದ ಇಂಡಿಯ ಮೈತ್ರಿಕೂಟ ಸಹಜ ಸಾವಿನತ್ತ ಸಾಗುತ್ತಿದೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

Spread the love

ಬೆಂಗಳೂರು: ಇಂಡಿಯ ಮೈತ್ರಿಕೂಟದಲ್ಲಿ ನೀತಿ ಇಲ್ಲ, ನಿಯತ್ತಿಲ್ಲ ಮತ್ತು ನೇತೃತ್ವವೂ ಇಲ್ಲ ಎಂದುಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಇಂಡಿಯ ಒಕ್ಕೂಟದ ರಚನೆಯೇ ಒಂದು ಅರ್ಥರಹಿರ ಕಸರತ್ತು,

ದಕ್ಷಿಣದ ಡಿಎಂಕೆ (DMK) ಜೊತೆ, ಉತ್ತರದ ಸಮಾಜವಾದಿ ಪಕ್ಷ (Samajwadi Party) ಮತ್ತು ಆರ್ ಜೆ ಡಿ ಹೊಂದಾಣಿಕೆಯಾಗುವುದು ಸಾಧ್ಯವೇ? ಒಂದು ಅನೈಸರ್ಗಿಕ ಮತ್ತು ಅಸಹಜವಾದ ಒಕ್ಕೂಟ ಸಹಜ ಸಾವಿನತ್ತ ಸಾಗುತ್ತಿದೆ ಎಂದು ಜೋಶಿ ಹೇಳಿದರು.

ಬಿಹಾರದಲ್ಲಿ ತಲೆದೋರಿರುವ ರಾಜಕೀಯ ತಲ್ಲಣದ ಬಗ್ಗೆ ಮಾತಾಡಿದ ಸಚಿವ, ಆರ್ ಜೆಡಿ ಪಕ್ಷದ ನಾಯಕರು ಮತ್ತು ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಅಂತ ತಮ್ಮ ಪಕ್ಷದ ಬಿಹಾರ ಸಂಸದರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

Spread the love ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ