Breaking News

ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ ರಾಮ ಮಂದಿರ; ಪ್ರಧಾನಿ ಮೋದಿಗೆ ಇದುವೇ ವಿಶೇಷ ಉಡುಗೊರೆ

Spread the love

ದಾವಣಗೆರೆ, :ಅಯೋಧ್ಯೆ ಶ್ರೀರಾಮ ಮಂದಿರ(Ayodhya Ram Mandir) ನಾಳೆ ಲೋಕಾರ್ಪಣೆಗೊಳ್ಳಲಿದೆ. ಈ ನಡುವೆ ಕರ್ನಾಟಕದಲ್ಲಿ ರಾಮ ಭಕ್ತರು ಅದರಲ್ಲೂ ಕಲಾವಿದರು ರಾಮ ಮಂದಿರದ ಸ್ಥಬ್ದಚಿತ್ರಗಳನ್ನು ರಚಿಸುತ್ತಿದ್ದಾರೆ. ಇತ್ತೀಚೆಗೆ ಪೆನ್ಸಿಲ್ ಲೆಡ್​ನಲ್ಲಿ ರಾಮನ ಕೆತ್ತನೆ, ಕೇಕ್​ನಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಜೈ ಶ್ರೀರಾಮ್ ಹೆಸರುಗಳಲ್ಲೇ ರಾಮನ ಚಿತ್ರ ಬಿಡಿಸಿರುವುದು ಸೇರಿದಂತೆ ಅನೇಕ ರೀತಿಯ ಚಿತ್ರಗಳನ್ನು ಬಿಡಿಸಲಾಗಿತ್ತು. ಇದೀಗ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಡುಗೊರೆ ನೀಡಲು ದಾವಣಗೆರೆಯಲ್ಲಿ (Davanagere) ನಾಣ್ಯಗಳಲ್ಲಿ ಅಯೋಧ್ಯೆ ರಾಮ ಮಂದಿರ ಸಿದ್ಧಪಡಿಸಲಾಗಿದೆ.

ಹರಿಹರ ನಗರದ ಆಕಾರ-ಆಧಾರ ಸಂಸ್ಥೆಯ ರಾಮು ಎಂ ಹಾಗೂ ಮಕ್ಕಳು ಸೇರಿಕೊಂಡು ಒಂದು, ಎರಡು, ಐದು, 10, 20 ರೂಪಾಯಿ ಮೌಲ್ಯದ ಒಟ್ಟು 12 ಸಾವಿರ ನಾಣ್ಯ ಬಳಸಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. ಒಟ್ಟು 31,500 ರೂಪಾಯಿ ವೆಚ್ಚದಲ್ಲಿ 30 ದಿನಗಳಲ್ಲಿ ಈ ಮಂದಿರವನ್ನು ಸಿದ್ಧಪಡಿಸಲಾಗಿದೆ. ನಾಳೆ ರಾಮ ಮಂದಿರದ ಉದ್ಘಾಟನೆ ಹಿನ್ನೆಲೆ ನಾಣ್ಯಗಳಿಂದ ಸಿದ್ಧವಾದ ಮಂದಿರವನ್ನು ಹುಬ್ಬಳ್ಳಿಯಲ್ಲಿ ಪ್ರದರ್ಶನ‌ಕ್ಕಿಡಲಾಗುತ್ತಿದೆ.


Spread the love

About Laxminews 24x7

Check Also

ಗೊಂದಲದ ಮಧ್ಯೆಯೂ ಗುಡ್ ನ್ಯೂಸ್ ನೀಡಿದ ಪೊಲೀಸರು

Spread the loveಬೆಳಗಾವಿಯ ಜಿಲ್ಲೆಯಲ್ಲಿ ಅದ್ಧೂರಿ ಗಣೇಶೋತ್ಸವ ನಡೆಯುತ್ತಿದ್ದು, ನಾಳೆ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಸಂಬಂಧ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ