ಬೆಂಗಳೂರು : ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anant kumar hegde) ಅವರು ಸಿಎಂ ಸಿದ್ದರಾಮಯ್ಯ (Siddaramiah) ವಿರುದ್ದ ಏಕವಚನ ಬಳಕೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಗ್ಗೆ ಬಿಜೆಪಿಗರೇ (BJP) ಬೇಸರ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ, (Shivaraj Tangadagi) ಅನಂತ್ ಕುಮಾರ್ ಹೆಗಡೆ ಹುಚ್ಚ ಎಂದು ಬಿಜೆಪಿಯವರೇ ತಿಳಿದುಕೊಂಡಿದ್ದಾರೆ ಎಂದು ಈಗ ಸಾಬೀತಾಯಿತು ಎಂದರು.
ಹೆಗಡೆ ಅವರ ಮಾತಿಗೆ ಬೆಲೆ ಕೊಡಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಅನಂತ್ ಕುಮಾರ್ ಹೆಗಡೆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಆತ ಬಿಜೆಪಿಯಲ್ಲಿ ಹುಚ್ಚ. ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಲೇವಡಿ ಮಾಡಿದರು.
ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಿ, ಇಲ್ಲದಿದ್ದರೆ ನಾವು ಕೊಡಿಸುತ್ತೇವೆ. ಹೆಗಡೆ ವಿರುದ್ದ ಕ್ರಮ ಕೈಗೊಳ್ಳಲು ಸಿಎಂ, ಡಿಸಿಎಂ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.