Breaking News

ನನ್ನಮ್ಮ ಎದೆ ಹಾಲು ಕುಡಿಸಿದ್ದಾಳೆ, ಇದರ ಬಗ್ಗೆ ಮಾತಾಡಿದರೆ ಹುಷಾರ್: ಹೆಗಡೆ

Spread the love

ಬೆಳಗಾವಿ, ಜನವರಿ 17: ಇತ್ತೀಚಿಗೆ ನನ್ನ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ನನ್ನಮ್ಮ ನನಗೆ ಎದೆ ಹಾಲು ಕುಡಿಸಿದ್ದಾಳೆ, ಬಾಟಲಿ ಹಾಲು ಕುಡಿಸಿಲ್ಲ. ನನ್ನ ರಕ್ತದ ಬಗ್ಗೆ ನನಗೆ ಗೌರವವಿದೆ. ಇದರ ಬಗ್ಗೆ ಯಾರಾದರೂ ಮಾತಾಡಿದರೆ ಹುಷಾರ್​ ಎಂದು ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ(Anantkumar Hegde)ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಕಿತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಲ್ಲಿ ಮಾತನಾಡಿದ ಅವರು, ನಮ್ಮ ರಾಮ, ಹಿಂದೂಗಳು, ಹಿರಿಯರ ಬಗ್ಗೆ ಮಾತಾಡಿದರೆ ಸಹಿಸಲ್ಲ. ಅವರು ಮೈಸೂರು ಗರಡಿಯಲ್ಲಿ ಬೆಳೆದಿದ್ದರೆ. ನಾನು ಕೂಡ ಮೈಸೂರು ಗರಡಿಯಲ್ಲಿಯೇ ಬೆಳೆದವನು ಎಂದು ಸಿಎಂ ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್​​ ನೀಡಿದ್ದಾರೆ.

ನಮ್ಮವರಿಗೆ ಏಕವಚನದಲ್ಲಿ ಮಾತಾಡಿದರೆ ಏನು ಮಾಡಲಿ? ಯುದ್ಧಭೂಮಿಯಲ್ಲಿ ಶಾಸ್ತ್ರೀಯ ಸಂಗೀತ, ಭರತ ನಾಟ್ಯಕ್ಕೆ ಅವಕಾಶವಿಲ್ಲ. ಯುದ್ಧಭೂಮಿಯಲ್ಲಿ ಹೇಗೆ ಮಾತಾಡಬೇಕೋ ಹಾಗೇ ಮಾತಾಡಬೇಕು
ಅಲ್ಲಿ ಹೋಗಿ ಭರತ ನಾಟ್ಯ ಮಾಡೋಕೆ ಆಗುತ್ತಾ ಎಂದಿದ್ದಾರೆ.

ಸ್ವಾಭಿಮಾನದಿಂದ ಮತ ಕೊಟ್ಟವರು ನೀವು

ನನಗೆ ಮತ ನೀಡಿದವರು ನೀವು. ನೀವು ಸ್ವಾಭಿಮಾನದಿಂದ ಮತ ನೀಡಿದ್ದು ನಿಜವಾದರೆ ನಾನು ಹೇಳಿದ್ದು ಸರಿ. ನಾನು ಬೇಡವೆಂದರೂ ನನ್ನ ಬೆನ್ನು ಬಿದ್ದವರು ನೀವು. ನಿಮ್ಮ ಪ್ರೀತಿಯಿಂದಲೇ ಇವತ್ತು ನಾನು ಇಲ್ಲಿದ್ದೇನೆ. ನಿಮಗೆ ನಾನು ಯಾವತ್ತೂ ಋಣಿ. ಕೊನೆಯವರೆಗೂ ನಾನು ನಿಮ್ಮೊಂದಿಗೆ ಇದ್ದೇನೆ. ಇದುವರೆಗೂ ನನ್ನ ಹಣೆ ಮೇಲೆ ಅಪವಾದವನ್ನು ದೇವರು ಬರೆದಿಲ್ಲ. ಇಲ್ಲಿ ನಿಮ್ಮ ಮುಂದೊಂದು ಭಾಷಣ. ಅಲ್ಲಿ ಹೋಗಿ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಇಂಥದ್ದು ಈ ನನ್ನ ರಕ್ತದಲ್ಲಿ ಇಲ್ಲ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ತ್ಯಾಜ್ಯ ಬಿಸಾಡಿದರೆ ಬೀಳುತ್ತೆ ದಂಡ

Spread the loveಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆಯ ಕುಮಾರಧಾರ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ