ಬೆಂಗಳೂರು, ಜನವರಿ : ಆನ್ಲೈನ್ ಡೇಟಿಂಗ್ಆಯಪ್ಮೂಲಕ ಯುವಕನಿಗೆ ( Boy ) ಲೈಂಗಿಕ ಕಿರುಕುಳ ನಿಡುತ್ತಿರುವ ಮಹಿಳೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬಾಲಿವುಡ್ ನಿರ್ದೇಶಕಿ ( Bollywood director ) ದೀಪಿಕಾ ನಾರಾಯಣ ಭಾರದ್ವಾಜ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ ದೀಪಿಕಾ ನಾರಾಯಣ ಭಾರದ್ವಾಜ್ ಅವರು ಸರಣಿ ಟ್ವೀಟ್ ಮಾಡಿ ಘಟನೆಯ ವಿವರವನ್ನು ಬಿಚ್ಚಿಟ್ಟಿದ್ದಾರೆ.
ಓರ್ವ ಯುವಕ ಡೇಟಿಂಗ್ ಆಯಪ್‌ನಲ್ಲಿ ಮಹಿಳೆಯನ್ನು ಭೇಟಿಯಾಗಿದ್ದಾನೆ. ನಂತರ ಮಹಿಳೆ ಯುವಕನೊಂದಿಗೆ ಆತ್ಮೀಯವಾಗಿರಲು ಮುಂದಾಗಿದ್ದಾಳೆ. ನಂತರ ಮಹಿಳೆ ಭೇಟಿಯಾಗುವಂತೆ ಯುವಕನ ದುಂಬಾಲು ಬೀಳುತ್ತಾಳೆ. ಆದರೆ ಯುವಕ ಇದನ್ನು ತಿರಸ್ಕರಿಸಿದ್ದಾನೆ. ಕೆಲ ದಿನಗಳ ಬಳಿಕ ಮಹಿಳೆ ಯುವಕನಿಗೆ ಹಣ ಕೇಳಲು ಆರಂಭಿಸುತ್ತಾಳೆ. ಆಗ ಯುವಕ ಹಣ ನೀಡಲು ನಿರಾಕರಿಸಿದ್ದಾನೆ. ಬಳಿಕ ಮಹಿಳೆ ಯುವಕನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ್ದಾನೆ.