Breaking News

ಮದುವೆಯಾಗಲು ಯುವತಿ ಸಿಗದಿದ್ದಕ್ಕೆ ಯುವಕ ವಿಷ ಸೇವಿಸಿ ಆತ್ಮಹತ್ಯೆ

Spread the love

ವಿಜಯನಗರ, ಜನವರಿ 16: ಮದುವೆಯಾಗಲು ಯುವತಿ (Girl) ಸಿಗದಿದ್ದಕ್ಕೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂಡ್ಲಿಗಿ (Kudligi) ತಾಲೂಕಿನ‌ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.

ಗುಡೇಕೋಟೆ ಗ್ರಾಮದ ಬಿ.‌ಮಧುಸೂದನ್ (26) ಮೃತ ದುರ್ದೈವಿ. ಯುವಕನ ತಂದೆ ಅರೆ ಹುಚ್ಚನ ಹಾಗೆ ವರ್ತನೆ ಮಾಡುತ್ತಾನೆಂದು ಕನ್ಯೆ ಕೊಡಲು ನಿರಾಕರಿಸುತ್ತಿದ್ದರಂತೆ. ಇದರಿಂದ ಮನನೊಂದಿದ್ದ ಯುವಕ ಕುಡಿಯಲು ಆರಂಭಿಸಿದ್ದಾನೆ. ನನಗೆ ಮದುವೆ ಅಗಲ್ಲ ಎಂದು ಮಧುಸೂದನ್ ಜನವರಿ 5ರಂದು ವಿಷಸೇವಿಸಿದ್ದಾನೆ. ಕೂಡಲೆ ಮಧುಸೂಧನ್​​ನನ್ನು ಬಳ್ಳಾರಿಯ ವಿಮ್ಸ್​​ ಆಸ್ಪತ್ರೆಗ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಧುಸೂಧನ್​ ಮೃತಪಟ್ಟಿದ್ದಾನೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ

Spread the loveಪಂಢರಪುರದ ಗೋಪಾಲಪುರದಲ್ಲಿರುವ ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ