Breaking News

ಅನಂತಕುಮಾರ ಹೆಗಡೆ ಎಲ್ಲಿ ಸಿಗ್ತಾನೋ ಅಲ್ಲೇ ಹಿಡಿದು ಹೊಡೆಯುತ್ತೇವೆ: ಮಾಜಿ ಶಾಸಕ ಎಸ್.ರಾಮಪ್ಪ

Spread the love

ದಾವಣಗೆರೆ,: ಸಿಎಂ ಸಿದ್ದರಾಮಯ್ಯ ಬಗ್ಗೆ ಇನ್ನೊಮ್ಮೆ ಈ ರೀತಿ ಏಕವಚನದಲ್ಲಿ ಮಾತಾಡಿದರೆ ಸಂಸದ ಅನಂತಕುಮಾರ ಹೆಗಡೆ ಎಲ್ಲಿ ಸಿಗುತ್ತಾರೆ ಅಲ್ಲಿ ಹಿಡಿದು ಹೊಡೆಯಲಾಗುವುದು ಎಂದು ಕಾಂಗ್ರೆಸ್‌ ಮಾಜಿ ಶಾಸಕ ಎಸ್.ರಾಮಪ್ಪವಾರ್ನಿಂಗ್‌ ‌ಮಾಡಿದ್ದಾರೆ. ಜಿಲ್ಲೆಯ ಹರಿಹರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಆರೋಗ್ಯ ಸರಿಯಿಲ್ಲ ಅಂತಾ ಹೆಗಡೆ ಮನೆಯಲ್ಲಿ‌ ಮಲಗಿದ್ದರು. ಚುನಾವಣೆ ಹಿನ್ನೆಲೆ ಕೋಮು‌ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ಹಲವರು ಜೈಲಿಗೆ ಹೋಗಿದ್ದಾರೆ, ಅವರ ಬಗ್ಗೆ ಮಾತನಾಡಲಿ. ಸಿಎಂ ಸಿದ್ದರಾಮಯ್ಯ ಹಸಿದ ಜನರಿಗೆ ಅನ್ನ ಕೊಟ್ಟಿದ್ದಾರೆ. ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದರೂ ಯಾವುದೇ ಕಪ್ಪು‌ಚುಕ್ಕೆ ಇಲ್ಲ. ಅವರ ಬಗ್ಗೆ ಮಾತನಾಡಲು ಹೆಗಡೆ ಯೋಗ್ಯತೆ ಏನು ಎಂದು ಪ್ರಶ್ನಿಸಿದ್ದಾರೆ.

 

ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಲಿ. ರಾಜ್ಯದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ವಿರುದ್ಧ ಮಾತನಾಡುತ್ತಿದ್ದಾರೆ. ಇವರು 70 ಗಡಿ ದಾಟಿದ್ದಾರೆ. ಹಿಂದು, ಮುಸ್ಲಿಂ ನಡುವೆ ಜಗಳ ಹಚ್ಚುವ ರೀತಿಯಲ್ಲಿ ಮಾಡುವುದನ್ನ ನಿಲ್ಲಿಸಲಿ ಎಂದು ಹೇಳಿದ್ದಾರೆ.

ಅನಂತಕುಮಾರ್ ಹೆಗಡೆ ಇಷ್ಟು ದಿನ ನಾಪತ್ತೆ ಆಗಿದ್ದರು: ಸಿಎಂ ಸಿದ್ದರಾಮಯ್ಯ

ಇಂದು ಕೂಡ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದು, ಅನಂತಕುಮಾರ್ ಹೆಗಡೆ ಇಷ್ಟು ದಿನ ನಾಪತ್ತೆ ಆಗಿದ್ದರು. ಅವರು ಬಡವರ ಕಷ್ಟ ಕೇಳಿದ್ದಾರಾ ಅಂತ ಆಕ್ರೋಶಭರಿತವಾಗಿ ಪ್ರಶ್ನೆ ಮಾಡಿದ್ದರು. ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿ, ಮಾನಸಿಕ ಸ್ಥಿರತೆ ಇರುವವರು ಹೀಗೆ ಮಾತನಾಡಲು ಹೋಗಲ್ಲ. ಅನಂತಕುಮಾರ್ ಹೆಗಡೆ ಹೆಲ್ತ್ ಬಗ್ಗೆ ಗಮನ ಕೊಡಲಿ ಅಂತ ಕಾಲೆಳೆದಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ