Breaking News

ಸಂಸದ ಭಗವಂತ ಖೂಬಾ ವಿರುದ್ದ ಸಿಡಿದೆದ್ದ ಶಾಸಕರು

Spread the love

ಬೆಂಗಳೂರು : ಸಂಸದ, ಕೇಂದ್ರ ಸಚಿವ ಭಗವಂತ ಖೂಬಾಗೆ (Bhagavant khooba) ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lokasabha election 2024) ಟಿಕೆಟ್‌ ನೀಡಬಾರದು ಎಂದು ಬಿಜೆಪಿ (BJP) ಶಾಸಕರೇ ಒತ್ತಾಯಿಸಿರುವ ಘಟನೆ ಬುಧವಾರ ಬಿಜೆಪಿ ಸಭೆಯಲ್ಲಿ ನಡೆದಿದೆ. ಶಾಸಕ ಪ್ರಭು ಚವ್ಹಾಣ್‌ (Prabhu chavhan) ಅವರು, ಭಗವಂತ ಖೂಬಾ ವಿರುದ್ದ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಇದಕ್ಕೆ ಹಲವು ಶಾಸಕರು ಸಹಮತಿ ವ್ಯಕ್ತಪಡಿಸಿದ್ದಾರೆ.

 

ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಇಂದು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.

ಕೇಂದ್ರ ಸಚಿವ ಭಗವಂತ ಖೂಬಾ ಶಾಸಕರ ಮನವಿಗಳಿಗೆ ಸ್ಪಂದಿಸುವುದಿಲ್ಲ. ಯಾರನ್ನೂ ಒಮ್ಮತಕ್ಕೆ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ . ಬೀದರ್‌ ಶಾಸಕರನ್ನೇ ನಿರ್ಲಕ್ಷ್ಯಿಸುತ್ತಾರೆಂಬ ದೂರುಗಳ ಸುರಿಮಳೆಯನ್ನೇ ಪ್ರಭು ಚವ್ಹಾಣ್‌ ಸುರಿಸಿದ್ದಾರೆ. ಇದಕ್ಕೆ ಹಲವು ಶಾಸಕರು ದನಿಗೂಡಿಸಿ, ಭಗವಂತ ಖೂಬಾಗೆ ಟಿಕೆಟ್‌ ನೀಡುವುದನ್ನು ವಿರೋಧಿಸಿದ್ದಾರೆ .


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ