ಬೆಂಗಳೂರು : ರಾಮ ಮಂದಿರ ಉದ್ಟಾಟನೆ(Ram Mandir Inauguration) ದಿನ ಹತ್ತಿರ ಬರುತ್ತಿದ್ದಂತೆ ರಾಮ ವಿರೋಧಿ ನೀತಿ (Anti Ram Strategies)ಅನುಸರಿಸುತ್ತಿದ್ದ ಕಾಂಗ್ರೆಸ್‌ಗೆ ಈಗ ಜನ ತಮ್ಮನ್ನ ವಿರೋಧಿಸುತ್ತಿದ್ದಾರೆ ಎಂಬುದು ಅರ್ಥವಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಹೊಟೇಲ್ ರಮಾಡದಲ್ಲಿ ಲೋಕಸಭೆ ಚುನಾವಣೆ ವಿಚಾರವಾಗಿ ಸಭೆ ನಡೆದಿದ್ದು , ಸಭೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ರಾಜಕೀಯದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ 28 ಸೀಟ್ ಗೆಲ್ಲಲು ಕಾರ್ಯ ತಂತ್ರ ರೂಪಿಸಲಾಗಿದೆ ಜೊತೆಗೆ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿಯೇ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ರಾಮ ಮಂದಿರ ಲೋಕಾರ್ಪಣೆ ದಿನ ರಾಜ್ಯದ ಮುಜರಾಯಿ ದೇವಾಯಗಳಲ್ಲಿ ವಿಶೇಷ ಪೂಜೆ ಆಯೋಜಿಸುವುದಾಗಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ಮತ್ತು ಡಿಸಿಎಂ ಡಿಕೆಶಿ ಅವರ ಹೇಳಿಕೆ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್‌ನವರಿಗೆ ಜನ ತಮ್ಮ ವಿರುದ್ಧ ತಿರುಗಿ ಬೀಳುತ್ತಿರುವುದು ಅರಿವಾಗಿದೆ. ಅವರ ರಾಮ ವಿರೋಧಿ ನೀತಿ ಉಲ್ಟಾ ಹೊಡೆದಿದೆ. ಹೀಗಾಗಿ ಈಗ ಡಿ ಕೆ ಶಿವಕುಮಾರ್ ತಾನೂ ರಾಮ ಭಕ್ತ ಎನ್ನುತ್ತಾರೆ, ರಾಮಲಿಂಗ ರೆಡ್ಡಿ ದೇವಸ್ಥಾನಗಳಲ್ಲಿ ರಾಮ ಪೂಜೆ ಮಾಡುವುದಾಗಿ ಹೇಳಿದ್ದಾರೆ ಎಂದರು. ರಾಮ ಮಂತ್ರಾಕ್ಷತೆ ಬಂದಿದ್ದು ಮೋದಿ ಸರ್ಕಾರ ನೀಡಿದ ಅಕ್ಕಿಯಿಂದ ಹೊರತು ಸಿದ್ದರಾಮಯ್ಯ ಅವರ ಅನ್ನ ಭಾಗ್ಯ ಅಕ್ಕಿಯಿಂದ ಅಲ್ಲ, ಅನ್ನ ಭಾಗ್ಯ ಯೋಜನೆಯಿಂದ ಒಂದು ಕಾಳು ಅಕ್ಕಿನೂ ಸಿಕ್ಕಿಲ್ಲ ಎಂದು ಅವರು ಈ ವೇಳೆ ಹೇಳಿದರು.
 Laxmi News 24×7
Laxmi News 24×7
				 
		 
						
					 
						
					