ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇಂದು ಮನೆ ಮನೆಗೆ ತೆರಳಿ ಅಯೋಧ್ಯೆಯ ಮಂತ್ರಾಕ್ಷತೆ ವಿತರಿಸಿದರು.
ಮಂತ್ರಾಕ್ಷತೆ ವಿತರಣೆ ಬಳಿಕ ಮಾತನಾಡಿರುವ ಅವರು, ರಾಮನಗರಿ ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆ ಬಂದಿವೆ. ಇವುಗಳನ್ನು ಮನೆ ಮನೆಗೆ ತಲುಪಿಸುವ ಪವಿತ್ರ ಕಾರ್ಯ ಮಾಡುತ್ತಿದ್ದೇವೆ.
ನಾನು ಈ ಹಿಂದೆಯೂ ಕರಸೇವಕನಾಗಿ ಕೆಲಸ ಮಾಡಿದ್ದೆ. ಮತ್ತೊಮ್ಮೆ ರಾಮನ ಕರಸೇವಕನಾಗಿ ಮಂತ್ರಾಕ್ಷತೆ ವಿತರಿಸುವ ಕಾರ್ಯ ಮಾಡುತ್ತಿದ್ದೇನೆ. ಜ.22 ರಂದು ರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ಈ ಮೂಲಕ ಕೋಟ್ಯಂತರ ಹಿಂದುಗಳ ಶತಮಾನದ ಕನಸು ನನಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ರಾಮ ರಾಜ್ಯ ನಿರ್ಮಾಣ ಆಗುತ್ತಿದೆ ಎಂದರು.
ಇನ್ನು ರಾಮ ಮಂದಿರದಿಂದ ಬಂದಿರುವ ಮಂತ್ರಾಕ್ಷತೆ ವಿತರಣೆ ಕಾರ್ಯ ರಾಜ್ಯದಲ್ಲಿ ನಡೆಯುತ್ತಿದೆ. ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ಕಾರ್ಯಕರ್ತರು, ಮನೆ ಮನೆಗೆ ತೆರಳಿ ರಾಮನ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಮಾಡುತ್ತಿದೆ.