ಶಿರಸಿ: ಶಿರಸಿ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ಶಿರಸಿ ಸೊರಬ ಮೈಸೂರು ರಾಜ ಹಂಸ ಸಾರಿಗೆ ಬದಲಿಗೆ ಸ್ಲೀಪರ್ ಕೋಚ್ ಬಸ್ ಗೆ ಶನಿವಾರ ಚಾಲನೆ ನೀಡಲಾಯಿತು.
ಶಾಸಕ ಭೀಮಣ್ಣ ನಾಯ್ಕ ಅವರು ಶಿರಸಿ ಸೊರಬ ಮೈಸೂರು ಹಾಗೂ ಶಿರಸಿ ಸೊರಬ ಬೆಂಗಳೂರು ಸ್ಲೀಪರ್ ಬಸ್ಸಿಗೆ ಚಾಲನೆ ನೀಡಿ, ಶಿರಸಿಗೆ ಇನ್ನಷ್ಟು ಹೊಸ ಬಸ್ಸುಗಳು ಬರಲಿವೆ ಎಂದರು.
ಹುಬ್ಬಳ್ಳಿ, ಮಣಿಪಾಲ, ಮಡಗಾಂವ್ ಗೆ ರಾಜಹಂಸ ಸಾರಿಗೆ ಕೂಡ ಬಿಡಲಿದ್ದೇವೆ. ಜಿಲ್ಲೆಗೆ ನಾಲ್ಕು ಪಲ್ಲಕ್ಕಿ ಬಸ್ಸು ಬರಲಿವೆ ಎಂದರು.
ಈ ವೇಳೆ ಸಾರಿಗೆ ಡಿಸಿ ಕೆ.ಎಚ್.ಶ್ರೀನಿವಾಸ, ಪ್ರವೀಣ ಶೇಟ್ ಇತರರು ಇದ್ದರು.