Breaking News

ಕೋಳಿ ತೂಕದಲ್ಲಿ ಮೋಸ ಮಾಡಿದವರನ್ನು ಮರಕ್ಕೆ ಕಟ್ಟಿ ಹಾಕಿದ ರೈತ

Spread the love

ಮಂಡ್ಯ: ಕೋಳಿ ಫಾರಂನಲ್ಲಿ ಮಾಂಸದ ಕೋಳಿ ತುಂಬುವಾಗ ಮೋಸ ಮಾಡಲು ಯತ್ನಿಸಿದವರನ್ನು ರೈತ ಮರಕ್ಕೆ ಕಟ್ಟಿ ಹಾಕಿದ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಹನುಮಂತೇಗೌಡಗೆ ಸೇರಿದ ಕೋಳಿಫಾರಂನಲ್ಲಿ ವಂಚನೆ ನಡೆದಿದೆ.

ಹನುಂತೇಗೌಡ ತಮ್ಮ ಕೋಳಿ ಫಾರಂನಲ್ಲಿ ಸಾಕು ಕೋಳಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದರು.

ಮೈಸೂರು ಮೂಲದ ಎನ್.ಆರ್ ಚಿಕನ್ ಕಂಪನಿ ಕೋಳಿ ಖರೀದಿಸಲು ಬರುತ್ತಿತ್ತು. ವಂಚಕರು ಕಳೆದ ಮೂರ್ನಾಲ್ಕು ತಿಂಗಳಿಂದ ಈ ರೈತನಿಗೆ ಕೋಳಿ ತುಂಬುವಾಗ ತೂಕದಲ್ಲಿ ಮೋಸ ಮಾಡ್ತಿದ್ದರು.

 

ಇಂದು ಅನುಮಾನಗೊಂಡ ರೈತ ಬೇರೆ ತೂಕದ ಯಂತ್ರ ತರಿಸಿ ತೂಕ ಹಾಕಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಈ ವೇಳೆ ಒಂದು ತೂಕದಲ್ಲಿ ರೈತನಿಗೆ ಸುಮಾರು 30 ಕೆಜಿ ವ್ಯತ್ಯಾಸ ಕಂಡು ಬಂದಿದೆ. ಇದರಿಂದ ರೊಚ್ಚಿಗೆದ್ದ ರೈತ ಹನುಮಂತೇಗೌಡ ಕೋಳಿ ತುಂಬಲು ಬಂದಿದ್ದ ನಾಲ್ವರಲ್ಲಿ ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿದ್ದಾರೆ.

ತೂಕದಲ್ಲಿ ಮೋಸ ಮಾಡಿ ಇದುವರೆಗೂ ವಂಚಿಸಿದವರ ವಿರುದ್ದ ಪೊಲೀಸರಿಗೆ ದೂರು ನೀಡಲಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ