Breaking News

ನೀನು ಕುಟುಂಬದಿಂದ ದೂರನೇ ಇರಬೇಕು.. Bigg Boss ಮನೆಯಲ್ಲಿ ಪ್ರತಾಪ್‌ ಭವಿಷ್ಯ ನುಡಿದ ಗುರೂಜಿ

Spread the love

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ -10 ಶುರುವಾಗಿ 80 ದಿನ ಮೇಲಾಗಿದೆ. ಫಿನಾಲೆ ವಾರದತ್ತ ಮನೆಯ ಆಟ ಸಾಗುತ್ತಿದ್ದಂತೆ ಸ್ಪರ್ಧಿಗಳ ಆಟವೂ ಕಾವು ಪಡೆದುಕೊಳ್ಳುತ್ತಿದೆ.

ಈ ವಾರ ಪ್ರತಾಪ್‌, ಮೈಕಲ್‌, ಕಾರ್ತಿಕ್‌ , ತುಕಾಲಿ ಸಂತೋಷ್‌, ವರ್ತೂರು ಸಂತೋಷ್‌ ನಾಮಿನೇಟ್‌ ಆಗಿದ್ದಾರೆ.

ಇವರಲ್ಲಿ ಒಬ್ಬರು ಮನೆ ಬಿಟ್ಟು ಹೋಗುತ್ತಾರೋ ಅಥವಾ ಎಲಿನೇಷನ್‌ ನಲ್ಲಿ ಏನಾದರೂ ಟ್ವಿಸ್ಟ್‌ & ಟರ್ನ್‌ ಇರಲಿದೆಯೋ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನೊಂದೆಡೆ ಬಿಗ್‌ ಬಾಸ್‌ ಮನೆಗೆ ಶ್ರೀವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಂದು ಸ್ಪರ್ಧಿಗಳ ಭವಿಷ್ಯ ಹೇಳಿದ್ದಾರೆ.

“ಕಾಲಿನ ಮೇಲೆ ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೋವೊಂದನ್ನು ಹಾಕಿದ್ದೀರಿ. ಅಂದಿನಿಂದ ನಿಮ್ಮ ಮನಸ್ಸಿನಲ್ಲಿದ್ದ ನೆಮ್ಮದಿಯಲ್ಲ ಹೋಯಿತು” ಎಂದು ವರ್ತೂರು ಅವರ ಭವಿಷ್ಯವನ್ನು ಗುರೂಜಿ ಹೇಳಿದ್ದಾರೆ.

ಇನ್ನು ನಮೃತಾ ಅವರ ಜೀವನದಲ್ಲಿ “ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗಿತೆಂದು” ಗುರೂಜಿ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ಮನೆಯವರಿಂದ ದೂರವಿರುವ ಡ್ರೋನ್‌ ಪ್ರತಾಪ್‌ ಅವರ ಬಳಿ, ” ಈ ವಿಚಾರವನ್ನು ಹೇಳಲು ನನಗೆ ಸಂಕಟವಾಗುತ್ತದೆ. ನೀನು ಕುಟುಂಬದಿಂದ ದೂರವಿರಬೇಕು. ಕುಟುಂಬದ ಜೀವನ ಅಷ್ಟು ಸರಿಯಲ್ಲ. ದೂರವಿದ್ದು ದೂತನಾಗುತ್ತೀಯ, ಹತ್ತಿರ ಹೋಗಿ ಹೇಸಿಗೆ ಆಗುತ್ತೀಯ ಅನ್ನೋದು ನಿನಗೆ ಬಿಟ್ಟದು” ಎಂದು ಹೇಳಿದ್ದಾರೆ.

ಇದನ್ನು ಕೇಳಿ ಪ್ರತಾಪ್‌ ಭಾವುಕರಾಗುವುದು ಪ್ರೋಮೊದಲ್ಲಿ ತೋರಿಸಲಾಗಿದೆ. ಮಂಗಳವಾರ(ಜ.2 ರಂದು) ಈ ಸಂಚಿಕೆ ಪ್ರಸಾರವಾಗಲಿದೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ